Chamarajanagar ಚಾಮರಾಜನಗರದಲ್ಲಿ ಮುಂದುವರೆದ ಕೊರೊನಾ ಮರಣಕೇಕೆ
ಚಾಮರಾಜನಗರ : ಕೊರೊನಾ ಎರಡನೇ ಅಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮರಣಮೃದಂಗವನ್ನು ಮುಂದುವರೆಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 12 ಜನರು ಕೊರೊನಾ ವೈರಸ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.
ಇದರ ಮಧ್ಯೆ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಗೂ ಕೂಡ ಸೋಂಕು ವಕ್ಕರಿಸುತ್ತಿದೆ.
ಜಿಲ್ಲೆಯಲ್ಲಿ ಈವರೆಗೂ 50 ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿವೆ.
ಕಳೆದ ಕೆಲ ದಿನಗಳಿಂದ ಚಾಮರಾಜನಗರದಲ್ಲಿ ಸರಣಿ ಸಾವುಗಳಾಗುತ್ತಿವೆ. ಜಿಲ್ಲಾದ್ಯಂತ ಚರ್ಚೆಗೆ ಹಾಗೂ ಆತಂಕಕ್ಕೆ ಕಾರಣವಾಗಿದೆ.










