Belgaum ಬೆಳಗಾವಿ : ರಸ್ತೆಗಿಳಿದ ವಾಹನ ಚಾಲಕರಿಗೆ ಲಾಠಿ ಏಟು
ಬೆಳಗಾವಿ : ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕುಂದಾನಗರಿಯಲ್ಲಿ ಪೊಲೀಸರು ಫುಲ್ ಆಕ್ಟೀವ್ ಆಗಿದ್ದಾರೆ.
ಇಂದಿನಿಂದ ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಪೊಲೀಸ್ರು ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರಿಂದ ತಪಾಸಣೆ ಮುಂದುವರೆದಿದೆ. ಅನಗತ್ಯವಾಗಿ ರಸ್ತೆಗಳಿಯುತ್ತಿರುವ ಜನರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಇಂದು ಮುಂಜಾನೆಯಿಂದಲೇ ಸಖತ್ ಆಕ್ಟೀವ್ ಆಗಿ ರಸ್ತೆಗಿಳಿದ ಪೊಲೀಸರು 10 ಗಂಟೆಯ ನಂತರ ಯಾರೂ ಮನೆಯಿಂದ ಹೊರ ಬರದಂತೆ ಮನವಿ ಮಾಡಿಕೊಂಡರು.
ಅಲ್ಲದೆ ವಾಹನಗಳನ್ನು ಜಫ್ತಿ ಮಾಡೋದಾಗಿ ಎಚ್ಚರಿಕೆ ನೀಡಿದರು. ಇತ್ತ ಬೈಲಹೊಂಗಲದಲ್ಲಿ ಕಟ್ಟು ನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ರಸ್ತೆಗಿಳಿದ ವಾಹನ ಚಾಲಕರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.










