ಬೆಂಗಳೂರಲ್ಲಿ ಇಂದು 15,913 ಜನರಲ್ಲಿ ಕೊರೊನಾ ದೃಢ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರ ತುಸು ತಗ್ಗಿದಂತೆ ಕಾಣುತ್ತಿದೆ.
ಇಂದು 15,913 ಜನರಲ್ಲಿ ಕೊರೊನಾ ದೃಢಪಟ್ಟಿದೆ.

ಮಹದೇವಪುರದಲ್ಲಿ 2125, ಆರ್ಆರ್ ನಗರದಲ್ಲಿ 1234, ದಕ್ಷಿಣದಲ್ಲಿ 1806, ಪೂರ್ವ ವಲಯದಲ್ಲಿ 2390,
ಬೊಮ್ಮನಹಳ್ಳಿ ವಲಯದಲ್ಲಿ 1637, ದಾಸರಹಳ್ಳಿಯಲ್ಲಿ 616, ಪಶ್ಚಿಮದಲ್ಲಿ 1463, ಯಲಹಂಕ 1119,
ಹಾಗೂ ನಗರದ ಹೊರವಲಯದಲ್ಲಿ 1501 ಸೇರಿದಂತೆ 15913 ಜನರಲ್ಲಿ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿದೆ.
ನಿನ್ನೆ 16,747 ಜನರಿಗೆ ಕೊರೊನಾ ದೃಢಪಟ್ಟಿತ್ತು.









