bidar ಬೀದರ್ ನಲ್ಲಿ ಬೆಳ್ಳಂಬೆಳಿಗ್ಗೆ ಫೀಲ್ಡ್ ಗಿಳಿದ ಪೊಲೀಸರು
ಬೀದರ್ : ಕೋವಿಡ್ ಎರಡನೆ ಅಲೆ ತಡೆಗಟ್ಟುವ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಹೇರಿದ್ದು, ಬೀದರ್ ನಲ್ಲಿ ಬೆಳ್ಳಂ ಬೆಳಿಗ್ಗೆ ಪೊಲೀಸರು ಫೀಲ್ಡ್ ಗಿಳಿದಿದ್ದಾರೆ.
ಮುಂಜಾನೆಯಿಂದಲೇ ಪೊಲೀಸರು ವಾಹನಗಳ ಪರಿಶೀಲನೆ ಮಾಡುತ್ತಿದ್ದಾರೆ.
ಜೊತೆಗೆ ಮಾಸ್ಕ್ ಹಾಕದವರಿಗೆ, ಹಾಗು ಅನಗತ್ಯ ಒಡಾಡುವವರಿಗೆ ದಂಡ ಹಾಕಿ ವಾಹನ ಜಪ್ತಿ ಮಾಡಲಾಗುತ್ತಿದೆ.
ನಗರದ ಬಸವೇಶ್ವರ ವೃತ ಸೇರಿದಂತೆ ವಿವಿಧ ವೃತದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ವ್ಯಾಪಾರಿಗಳಿಗೆ ಹಾಗೂ ವರ್ತಕರಿಗೆ ನಿಗದಿ ಮಾಡಿರುವ ಸರಿಯಾದ ಸಮಯಕ್ಕೆ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ತಿಳಿಸುತ್ತಿದ್ದಾರೆ.










