‘ನಾಯಿಯನ್ನು ನಾಯಿ’ ಎಂದಿದ್ದೇ ತಪ್ಪಾ…? ನಿಮ್ಮ ನಾಯಿ ಎಂದಿದ್ದಕ್ಕೆ ಮಕ್ಕಳು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಮಾಲೀಕ..!
ಹರಿಯಾಣ : ಸಾಕು ನಾಯಿ ಹಾಗೂ ಮಾಲೀಕರ ನಡುವಿನ ಪ್ರೀತಿ ಎಷ್ಟೆಂದು ಹೇಳೋಕಾಗಲ್ಲ.. ಸಾಕುನಾಯಿಗಳನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಂಡು ಪ್ರೀತಿಸುವ ಜನರೂ ಇದ್ದಾರೆ. ಕೆಲವೊಮ್ಮೆ ನಾನಾ ಕಾರಣಗಳಿಂದ ಸಾಕು ನಾಯಿಗಳ ಮಾಲೀಕರು ಬೇರೆಯವರೊಂದಿಗೆ ದೊಡ್ಡ ದೊಡ್ಡ ಜಗಳವನ್ನೇ ಮಾಡಿಕೊಂಡಿದ್ದಾರೆ.. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ‘ನಾಯಿಯನ್ನು ನಾಯಿ’ ಎಂದು ಕರೆದಿದ್ದಕ್ಕೆ ನೆರೆ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾನೆ.. ಇಂತಹದೊಂದು ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮದ ಜ್ಯೋತಿ ಪಾರ್ಕ್ ನಿವಾಸಿಯಾಗಿರುವ ವ್ಯಕ್ತಿಯೊಬ್ಬ ನಾಯಿ ಸಾಕಿದ್ದು, ಅದಕ್ಕೆ ಟಾಮಿ ಎಂದು ಹೆಸರಿಟ್ಟಿದ್ದಾನೆ. ಪ್ರತಿದಿನ ಅದರ ವಾಕಿಂಗ್ ಮಾಡಿಸುವುದನ್ನು ಮರೆಯುವುದಿಲ್ಲವಂತೆ. ಆದರೆ ಆ ನಾಯಿ ಅಕ್ಕ ಪಕ್ಕದ ಮಕ್ಕಳ ಮೈ ಮೇಲೆ ಎಗರಲು ಪ್ರಯತ್ನಿಸುತ್ತಿತ್ತಂತೆ. ಅದೇ ಕಾರಣಕ್ಕೆ ಆತನ ನೆರೆ ಮನೆ ನಿವಾಸಿ ಸುಧೀರ್ ಎಂಬಾತ ಒಂದು ಸಲಹೆ ನೀಡಿದ್ದಾನೆ. ನಿಮ್ಮ ನಾಯಿಗೆ ಚೈನ್ ಹಾಕಿಕೊಂಡು ವಾಕಿಂಗ್ ಕರೆದುಕೊಂಡು ಹೋಗಿ ಎಂದಿದ್ದಾನೆ.
ಟಾಮಿಯನ್ನು ನಾಯಿ ಎಂದು ಚೈನ್ ಹಾಕು ಎಂದಿದ್ದಕ್ಕೇ ಸಿಟ್ಟಿಗೆದ್ದ ನಾಯಿಯ ಮಾಲೀಕ ಸುಧೀರ್ ಜೊತೆಗೆ ಕಿತ್ತಾಡಿದ್ದಾನೆ.. ಮಾತಿನ ಚಕಮಕಿ ನಡೆದಿದೆ.. ಇದೇ ವೇಳೆ ನಾಯಿ ಮಾಲೀಕ ಸುಧೀರ್ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯರು ಮಕ್ಕಳು ಎಂದೂ ಸಹ ನೋಡದೇ ಹುಚ್ಚನ ರೀತಿ ವರ್ತಿಸಿದ್ದಾನೆ.. ಮಕ್ಕಳು ಸೇರಿ ಒಟ್ಟು 6 ಮಂದಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಈ ವಿಚಾರವಾಗಿ ಸುಧೀರ್ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.








