ಗಂಟಲಿನ ಸೋಂಕು ನಿವಾರಣೆಗೆ ಕೆಲವು ಮನೆಮದ್ದುಗಳು
ಗಂಟಲಿನ ಸೋಂಕು ನಮಗೆ ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹೆಚ್ಚಾಗಿ ಶೀತವಿದ್ದಾಗ ಗಂಟಲಿನ ಸೋಂಕು ಕೂಡ ಪ್ರಾರಂಭವಾಗುತ್ತದೆ. ಇದರಿಂದಾಗಿ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಗಂಟಲು ಸೋಂಕಿನಿಂದಾಗಿ, ತಿನ್ನುವುದು ಮತ್ತು ಕುಡಿಯುವುದಕ್ಕೂ ತೊಂದರೆ ಆಗುತ್ತದೆ.
ಕೊರೋನಾ ಸೋಂಕಿನ ಲಕ್ಷಣಗಳಲ್ಲಿ ಗಂಟಲು ನೋವು ಕೂಡ ಒಂದಾಗಿರುವ ಹಿನ್ನೆಲೆಯಲ್ಲಿ ಗಂಟಲು ಸೋಂಕಿಗೆ ತಕ್ಷಣ ಚಿಕಿತ್ಸೆ ನೀಡಬೇಕು.
ಗಂಟಲಿನ ಸೋಂಕು ನಿವಾರಿಸಬಹುದಾದ ಕೆಲವು ಮನೆಮದ್ದುಗಳು ಇಲ್ಲಿದೆ
1. ಜೇನು ಚಹಾವನ್ನು ಸೇವಿಸಿ – ನಿಮಗೆ ಗಂಟಲು ನೋವು ಇದ್ದರೆ, ಜೇನು ಚಹಾವನ್ನು ಬಳಸಿ.
ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಗಂಟಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೋಂಕು ಉಂಟಾದಾಗ ಚಹಾಕ್ಕೆ ಸಕ್ಕರೆಯ ಬದಲು ಜೇನುತುಪ್ಪವನ್ನು ಬಳಸಿ.(ಬಿಸಿಯಾಗಿರುವ ಚಹಾಕ್ಕೆ ಜೇನುತುಪ್ಪವನ್ನು ಬಳಸಬಾರದು)
2 ಗಿಡಮೂಲಿಕೆ ಚಹಾವನ್ನು ಬಳಸಿ – ಗಂಟಲಿನ ಸೋಂಕಿನಿಂದ ಪರಿಹಾರ ಪಡೆಯಲು, ಗಿಡಮೂಲಿಕೆ ಚಹಾವನ್ನು ಬಳಸಬೇಕು. ಇದಕ್ಕಾಗಿ, ನೀವು , ತುಳಸಿ ಮತ್ತು ಕರಿಮೆಣಸನ್ನು ನೀರಿನಲ್ಲಿ ಕುದಿಸಿ. ನಂತರ ಅದನ್ನು ಚಹಾದಂತೆ ಬಿಸಿಯಾಗಿ ಕುಡಿಯಿರಿ. ಇದು ನಿಮ್ಮ ಗಂಟಲಿಗೆ ಸಾಕಷ್ಟು ಪರಿಹಾರ ನೀಡುತ್ತದೆ.
3 ಅರಿಶಿನ ಮತ್ತು ಶುಂಠಿ ಹಾಲು ಕುಡಿಯಿರಿ – ಗಂಟಲು ನೋವಿಗೆ ಪರಿಹಾರ ಪಡೆಯಲು ಅರಿಶಿನ ಮತ್ತು ಶುಂಠಿ ಹಾಲು ಕುಡಿಯಿರಿ. ಇದಕ್ಕಾಗಿ, ನೀವು ಹಾಲಿನಲ್ಲಿ ಒಂದು ಸಣ್ಣ ತುಂಡು ಶುಂಠಿಯನ್ನು ಮತ್ತು ಸ್ವಲ್ಪ ಪ್ರಮಾಣದ ಅರಿಶಿನವನ್ನು ಸೇರಿಸಿ, ಅರಿಶಿನ ಸಂಪೂರ್ಣವಾಗಿ ಕರಗುವವರೆಗೆ ಹಾಲನ್ನು ಕುದಿಸಿ. ಈಗ ಈ ಹಾಲನ್ನು ಬಿಸಿಯಾಗಿ ಕುಡಿಯಿರಿ.
4 ಉಪ್ಪುನೀರಿನ ಗಾರ್ಗಲ್ – ನೋಯುತ್ತಿರುವ ಗಂಟಲಿಗೆ ಉಪ್ಪುನೀರಿನ ಗಾರ್ಗಲ್ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ಸ್ವಲ್ಪ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮತ್ತು ಅದರೊಂದಿಗೆ ದಿನಕ್ಕೆ 3-4 ಬಾರಿ ಗಾರ್ಗ್ಲ್ ಮಾಡಿ. ಸಾಲ್ಟ್ ಟೀ ಗಂಟಲು ನೋವು ನಿವಾರಿಸುತ್ತದೆ.
5 ಶುಂಠಿ ಕ್ಯಾಂಡಿ – ಗಂಟಲಿನಲ್ಲಿ ನೋವಿದ್ದರೆ ಆಹಾರವನ್ನು ನುಂಗುವುದಕ್ಕೂ ಕಷ್ಟವಾಗುತ್ತದೆ. ಕೆಲವೊಮ್ಮೆ ನೀರನ್ನು ನುಂಗಲು ಸಹ ತೊಂದರೆ ಆಗುತ್ತದೆ. ಈ ಸಂದರ್ಭದಲ್ಲಿ, ನೀವು ಶುಂಠಿ ಕ್ಯಾಂಡಿಯನ್ನು ಚೀಪುತ್ತಿರಿ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
ಶೀತ, ನೆಗಡಿ, ವೈರಲ್ ಜ್ವರಕ್ಕೆ ಪರಿಣಾಮಕಾರಿ ಕಷಾಯಗಳು#Saakshatv #healthtips https://t.co/F9y0QEyaAW
— Saaksha TV (@SaakshaTv) May 12, 2021
ವಾಟ್ಸಾಪ್ ಮೂಲಕ ವ್ಯಾಕ್ಸಿನೇಷನ್ ಸೆಂಟರ್ ಅನ್ನು ಹೇಗೆ ಕಂಡುಹಿಡಿಯಬಹುದು ?#Covid #VaccinationCenter #WhatsApp https://t.co/2yTqNJTvY2
— Saaksha TV (@SaakshaTv) May 7, 2021
ಕಾಳು ಮೆಣಸು ಸಾರು (ಬಾಣಂತಿ ಸಾರು )#Saakshatv #cooking #recipe https://t.co/43m1leMELu
— Saaksha TV (@SaakshaTv) May 9, 2021
ಪೋಟ್ಯಾಟೋ( ಆಲೂಗಡ್ಡೆ) ಲಾಲಿಪಾಪ್#Saakshatv #cookingrecipe #potato #lollipop https://t.co/8Xd6Perkqe
— Saaksha TV (@SaakshaTv) May 7, 2021
ಕೊರೋನಾ ಸಮಯದಲ್ಲಿ ವಾಕ್ ಅಥವಾ ಜಾಗಿಂಗ್ ಸುರಕ್ಷಿತವೇ? ಆರೋಗ್ಯ ತಜ್ಞರ ಅಭಿಪ್ರಾಯವೇನು?#Saakshatvhealthtips #joggingduringcorona https://t.co/BAcJwIPdU7
— Saaksha TV (@SaakshaTv) May 7, 2021
#Saakshatv #healthtips #homeremedies