ನಾನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇದ್ದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಶಾಸಕರು, ಸಂಸದರು ತಮ್ಮ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಆದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಮಂಡ್ಯ ಸಂಸದರು ಎಲ್ಲಿ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್ ನಾನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇದ್ದೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕ್ವಾರೆಂಟೈನ್ ನಲ್ಲಿ ಇರುವಂತೆ ಹೇಳಿದ್ದರು. ಹಾಗಾಗಿ ಕ್ವಾರೆಂಟೈನ್ ನಲ್ಲಿದ್ದೆ . ಈ ಕಾರಣಕ್ಕೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಲು ಆಗಿಲ್ಲ. ನಾನು ಪ್ರವಾಸೋದ್ಯಮ ಇಲಾಖೆ ಸಮಿತಿಯ ಸದ್ಯಸೆಯಾಗಿದ್ದೇನೆ. ಮಾರ್ಚ್ 20 ರಂದು ದೆಹಲಿಯಲ್ಲಿ ಸಮಿತಿ ಸಭೆ ಕರೆದಿತ್ತು. ಸಭೆಯಲ್ಲಿ ನಾನು ಭಾಗಿಯಾಗಿದ್ದೆ, ಜೊತೆಗೆ ಸಭೆಯಲ್ಲಿ ಬಿಜೆಪಿ ನಾಯಕಿ ವಸುಂಧರಾ ರಾಜೇ ಅರಸ್ ಪುತ್ರ ದುಶ್ಯಂತ್ ಸಿಂಗ್ ಭಾಗಿಯಾಗಿದ್ದರು. ಅವರು ಗಾಯಕಿ ಕನ್ನಿಕಾ ಕಫೂರ್ ಪಾರ್ಟಿ ಗೆ ಹೋಗಿ ಬಂದಿದ್ದರು. ಕನ್ನಿಕಾ ಕಪೂರ್ ಅವರಿಗೆ ಕೊರೊನಾ ದೃಢಪಟ್ಟಿತ್ತು. ಈ ವಿಚಾರದಲ್ಲಿ ಬೆಳಕಿಗೆ ಬಂದ ಮೇಲೆ ಸಭೆಯಲ್ಲಿ ಭಾಗಿಯಾಗಿದ್ದವರು 14 ದಿನ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಿದ್ದರು. ಇದಾದ ಬಳಿಕ ಗಾಯಕಿ ಕನ್ನಿಕ ಕಪೂರ್ ಗೆ ಕೊರೊನಾ ನೆಗೆಟಿವ್ ಎಂದು ವರದಿ ಬಂದಿತ್ತು. ಆದರೂ ಸಹ ಕ್ವಾರೆಂಟೈನ್ ನಲ್ಲಿ ಇರಿ ಎಂದು ಹೇಳಿದ್ದರು. ಹಾಗಾಗಿ ನಾನು ಕ್ವಾರೆಂಟೈನ್ ನಲ್ಲಿ ಇದ್ದೆ. ನನ್ನ ಮಗನಿಂದನೂ ದೂರ ಇದ್ದೇನೆ. ಅವನು ಜೆಪಿ ನಗರದಲ್ಲಿ ಇದ್ದ, ನಾನು ವಸಂತ ನಗರದ ನಿವಾಸದಲ್ಲಿ ಇದ್ದೆ. ಈ ವಿಚಾರ ತಿಳಿಯದೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!
ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರಿತ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ, ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಶಾಕ್ ಎದುರಾಗಿದೆ....








