ತಂಡದಲ್ಲಿಸ್ಥಾನ ಕಳೆದುಕೊಳ್ಳುತ್ತಿದ್ದಂತೆ ಕಿಂಗ್ ಕೊಹ್ಲಿಯನ್ನ ಕೆಣಕಿದ ಕುಲ್ ದೀಪ್
ಮುಂಬೈ : ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆ ಟಿಪ್ಪಣಿಗಳು ಬರುತ್ತಲೇ ಇರುತ್ತವೆ. ಅನೇಕ ಕ್ರಿಕೆಟ್ ದಿಗ್ಗಜರು ವಿರಾಟ್ ಕ್ಯಾಪ್ಟನ್ಸಿ ಬಗ್ಗೆ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದ್ರೆ ಟೀಕೆಗಳಿಗೆ ತಲೆಕಡೆಸಿಕೊಳ್ಳದೇ ಆನೆ ನಡೆದಿದ್ದೇ ದಾರಿಯಂತೆ ವಿರಾಟ್ ಸಾಗುತ್ತಿದ್ದಾರೆ.
ಇದೀಗ ಕೊಹ್ಲಿ ನಾಯಕತ್ವದ ಬಗ್ಗೆ ಯುವ ಆಟಗಾರ ಕುಲದೀಪ್ ಯಾದವ್ ಮಾತನಾಡಿದ್ದು, ವಿರಾಟ್ ಕೊಹ್ಲಿ ಅವರನ್ನು ಕೆಣಕಿದ್ದಾರೆ. ಒಂದು ಕಡೆ ಧೋನಿಯನ್ನು ಹೊಗಳುತ್ತಾ ಪರೋಕ್ಷವಾಗಿ ವಿರಾಟ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಸದ್ಯ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಬಿಸಿಸಿಐ ಪ್ರಕಟಿಸಿದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ ಕುಲ್ ದೀಪ್ ಯಾದವ್, ಮಾಧ್ಯಮದೊಂದಿಗೆ ಮಾತನಾಡುತ್ತಾ, ನಾನು ಧೋನಿಯನ್ನು ಮೈದಾನದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದು, ಅವರು ತುಂಬಾ ಅನುಭವಗಳನ್ನು ಹೊಂದಿದ್ದರು.
ತಂಡದ ನಾಯಕನಾಗಿ ತಂಡವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದರು. ಪ್ರತಿ ಬಾರಿ ಬೌಲಿಂಗ್ ಮಾಡಲು ಬಂದಾಗ ವಿಕೆಟ್ ಹಿಂದೆ ನಿಂತು ನನಗೆ ಪ್ರೋತ್ಸಾಹ ಕೊಡುತ್ತಿದ್ದರು. ಆದರೆ ಇದೀಗ ಅಂತಹ ಪ್ರೋತ್ಸಾಹ ಕೊಡುವರಿಲ್ಲ ಎನ್ನುವ ಮೂಲಕ ಕೊಹ್ಲಿಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾಹಿ ಭಾಯಿ ನಾಯಕನಾಗಿರುವಾಗ ನಾನು ಮತ್ತು ಚಹಲ್ ಯಾವತ್ತು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದೇವು. ಮಾಹಿ ಭಾಯಿ ಹೇಳಿದಂತೆ ಬೌಲಿಂಗ್ ಮಾಡಿ ಹಲವು ಬಾರಿ ತಂಡಕ್ಕೆ ಜಯ ತಂದುಕೊಟ್ಟಿದ್ದೇವೆ.ಆದ್ರೆ ಈಗ ನಮಗೆ ಆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಹೇಳುವ ಮೂಲಕ ಕೊಹ್ಲಿ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಕುಲದೀಪ್ ಅವರ ಈ ಹೇಳಿಕೆ ಇದೀಗ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಉತ್ತಮ ಪ್ರದರ್ಶನ ನೀಡದೇ ತಂಡದಿಂದ ಹೊರಬಿದ್ದಿದ್ದಕ್ಕೆ ಕೊಹ್ಲಿ ಕಾರಣ ಅನ್ನೋದು ಸರಿಯಲ್ಲ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇನ್ನು ಕುಲದೀಪ್ ಯಾದವ್ ಭಾರತದ ಪರ 63 ಏಕದಿನ ಪಂದಗಳನ್ನು ಆಡಿ 105 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 20 ಪಂದ್ಯಗಳಿಂದ 39 ವಿಕೆಟ್ ಕಬಳಿದ್ದಾರೆ.
ಕೊರೊನ ಮಹಾಮಾರಿ :
ಕೊರೊನ ವೈರಸ್ ಗೆ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.










