ದೇಶಕ್ಕೆ ನಾವೇ ನಂ.1 : ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಫಿಕ್ಸ್..!
ಬೆಂಗಳೂರು : ರಾಜ್ಯದಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳು ಕಡಿಮೆ ಬರುತ್ತಿವೆ. ಇದು ಸೋಂಕು ಕಡಿಮೆ ಆಗಿರುವುದರಿಂದ ಬರುತ್ತಿರುವ ಪ್ರಕರಣಗಳಲ್ಲ. ಬದಲಿಗೆ ಟೆಸ್ಟಿಂಗ್ ಕಡಿಮೆ ಮಾಡಿರುವುದರಿಂದ ಸಂಖ್ಯೆ ಕಡಿಮೆ ಬರ್ತಿದೆ. ಆದ್ರೆ ರಾಜ್ಯದಲ್ಲಿ ಸದ್ಯ 6 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಇಡೀ ದೇಶದಲ್ಲಿ ಕರ್ನಾಟಕವೇ ನಂಬರ್ 1 ಸ್ಥಾನದಲ್ಲಿದೆ.
ಜೊತೆಗೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 25ಕ್ಕಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ಗೆ ಸರ್ಕಾರದ ಸಚಿವರು, ತಜ್ಞರು ಕೂಡ ಒತ್ತಡ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇನ್ನೊಂದು ವಾರ ಅಂದರೆ ಮೇ 24ರ ಜೊತೆಗೆ ಮೇ 30ರವರೆಗೂ ಲಾಕ್ ಡೌನ್ ವಿಸ್ತರಿಸೋದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಅಂತ ತಿಳಿದು ಬಂದಿದೆ.

ಕೊರೊನಾ ಕಫ್ರ್ಯೂ, ಜನತಾ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಗುರುವಾರ ಅಥವಾ ಶುಕ್ರವಾರ ಲಾಕ್ ಡೌನ್ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತ ಘೋಷಣೆ ಹೊರಡಿಸುವ ಸಂಭವ ಇದೆ.









