ನಾಳೆಯಿಂದ ಯಾದಗಿರಿ ಜಿಲ್ಲೆ ಮೂರು ದಿನ ಕಂಪ್ಲೀಟ್ ಲಾಕ್ Yadagiri
ಯಾದಗಿರಿ : ಜಿಲ್ಲೆಯಲ್ಲಿ ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾಳೆಯಿಂದ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದೆ.
ಹೀಗಾಗಿ ಯಾದಗಿರಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನ ಗಜಿಬಿಜಿ ಅನ್ನುತ್ತಿದ್ದರು.
ನಾಳೆಯಿಂದ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್ ಡೌನ್ ಇರುವುದರಿಂದ ಮುಂದಿನ ಮೂರು ದಿನ ತರಕಾರಿ ಸಹ ಸಿಗೋದಿಲ್ಲ. ಹೀಗಾಗಿ ಇವತ್ತೆ ತರಕಾರಿ ಖರೀದಿಗೆ ಜನರು ಬಿಗಿಬಿದ್ದರು.
ನಾಳೆಯಿಂದ ಮೂರು ದಿನಗಳ ಕಾಲ ಮೆಡಿಕಲ್,ಆಸ್ಪತ್ರೆ ಹಾಗೂ ಪೆಟ್ರೋಲ್ ಬಂಕ್ ಮಾತ್ರ ಓಪನ್ ಇರಲಿದ್ದು, ಉಳಿದಂತೆ ಎಲ್ಲಾ ಸೇವೆಗಳು ಸಂಪೂರ್ಣ ಬಂದ್ ಆಗಲಿವೆ.










