ಕೊರೊನಾ ಲಸಿಕೆ ಪಡೆದಂತೆ ನಟಿಸಿದ್ರಾ ನಯನತಾರಾ – ಟ್ರೋಲ್
ಚೆನ್ನೈ : ಕೋವಿಡ್ 2ನೇ ಅಲೆ ನಡುವೆ ಲಸಿಕೆ ಅಭಿಯಾನವು ದೇಶದಲ್ಲಿ ಜಾರಿಯಲ್ಲಿದ್ದು, ಸಿನಿಮಾ ತಾರೆಯರು ಸಹ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಅನೇಕರು ಲಸಿಕೆ ಹಾಕಿಸಿಕೊಂಡು ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರಿಗೂ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ..
ಅದ್ರಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರ ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ವಿಗ್ನೇಶ್ ಜೊತೆಗೆ ಬಂದು ಲಸಿಕೆ ಪಡೆದುಕೊಂಡಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹೊಂಚಿಕೊಂಡಿದ್ದರು.
ಆದ್ರೆ ಇದೀ ನಯನತಾರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಲಸಿಕೆ ನೀಡುತ್ತಿದ್ದ ನರ್ಸ್ ಕೈಯಲ್ಲಿ ಸಿರಿಂಜ್ ಇಲ್ಲ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಫೋಟೋ ವೈರಲ್ ಆಗುತ್ತಿದ್ದಂತೆಯೇ ವಿಘ್ನೇಶ್ ಶಿವನ್ ಫೋಟೋದಲ್ಲಿ ಕಾಣಿಸುತ್ತಿರುವ ಸಿರಿಂಜ್, ನಯನತಾರಾ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಅನೇಕ ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಕೇವಲ ಲಸಿಕೆ ತೆಗೆದುಕೊಂಡಂತೆ ನಟನೆ ಮಾಡಿದ್ರಾ ನಯನತಾರ ಎಂಬ ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ.
ಆದ್ರೆ ನಯನತಾರಾ ಅಭಿಮಾನಿಗಳು ನೆಚ್ಚಿನ ನಟಿ ಪರ ನಿಂತಿದ್ದು, ಸಿರಿಂಜ್ ನರ್ಸ್ ಕೈಯಲ್ಲಿ ಅವಿತುಕೊಂಡಿದೆ. ಅಲ್ಲದೆ ವಿಘ್ನೇಶ್ ಶಿವನ್ ಫೋಟೋವನ್ನು ಮತ್ತೊಂದು ಬದಿಯಿಂದ ಕ್ಲಿಕ್ಕಿಸಿರುವ ಕಾರಣ ಸಿರಿಂಜ್ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.