ಕಾಂಗ್ರೆಸ್ ಗೆ ಹಿಂದೂ ವಿರೋಧಿ ಮಾನಸಿಕತೆ ಇದೆ : ಸಿ.ಟಿ.ರವಿ
ಬೆಂಗಳೂರು : ಕಾಂಗ್ರೆಸ್ ಗೆ ಹಿಂದೂ ವಿರೋಧಿ ಮಾನಸಿಕತೆ ಇದೆ. ಕುಂಭಮೇಳದ ಆಯೋಜಕರು ಮೋದಿ ಮನವಿ ಮೇರೆಗೆ ಅದನ್ನು ರದ್ದುಗೊಳಿಸಿದರು. ಆದರೆ ಈಗಲೂ ಪ.ಬಂಗಾಳದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಮಾಡಿದರು. ಹೈದರಾಬಾದ್ನಲ್ಲಿ ಮುಸ್ಲಿಂರು ದೊಡ್ಡ ಸಮಾವೇಶ ಮಾಡಿದರು. ಅದನ್ನು ಸೂಪರ್ ಸ್ಪ್ರೆಡರ್ ಅಂಥ ಏಕೆ ಬಿಂಬಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಟೂಲ್ ಕಿಟ್ ಮೂಲಕ ಭಾರತ ಸರ್ಕಾರ, ಮೋದಿಯನ್ನು ಅವಹೇಳನ ಮಾಡಲು ಷಡ್ಯಂತ್ರ ನಡೆಸುತ್ತಿದೆ. ನಕಲಿ ಟೂಲ್ಕಿಟ್ ಅಂಥ ಕಾಂಗ್ರೆಸ್ ಹೇಳ್ತಾ ಇದೆ. ನಕಲಿ ಆಗಿದ್ದರೆ, ಟೂಲ್ ಕಿಟ್ ನಲ್ಲಿ ಇರುವ ರೀತಿಯಲ್ಲೇ ದೇಶದ ಉದ್ದಗಲಕ್ಕೆ ಕಾಂಗ್ರೆಸ್ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ರೀತಿ ಕಾಕತಾಳಿಯವೇ?. ಟೂಲ್ ಕಿಟ್ ಮೂಲಕ ಅವಹೇಳನ ಅರಾಜಕತೆ ಹುಟ್ಟು ಹಾಕುವ ಸಂಚೇ?. ಟೂಲ್ ಕಿಟ್ ನಕಲಿ ಆಗಲು ಸಾಧ್ಯವಿಲ್ಲ. ಇದು ಪೂರ್ವ ಯೋಜಿತ, ಕೃತ್ಯವಾಗಿದೆ. ಟೂಲ್ ಕಿಟ್ ನಲ್ಲಿ ಕುಂಭ ಮೇಳವನ್ನು ಸೂಪರ್ ಸ್ಪ್ರೆಡರ್ ಅಂತ ಬಿಂಬಿಸಿದ್ದಾರೆ. ಅದನ್ನು ಎಲ್ಲಾ ಕಡೆ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ವ್ಯಾಕ್ಸಿನ್ ತಗೊಂಡರೆ ಜನ ಸಾಯ್ತಾರೆ, ಇದು ಮೋದಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದ್ದರು. ವಿದೇಶದಿಂದ ಬಂದಿದ್ದೆಲ್ಲಾ ಒಳ್ಳೆಯದು ಎಂಬ ಗುಲಾಮಿ ಮನಸ್ಥಿತಿ ಕಾಂಗ್ರೆಸ್ ನದ್ದು. ಈಗ ಕಾಂಗ್ರೆಸ್ ನವರೆಲ್ಲರೂ ಗುಟ್ಟಾಗಿ ಹೋಗಿ ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಇದು ಕಾಂಗ್ರೆಸ್ ನ ಇಬ್ಬಂಗಿತನವಾಗಿದೆ. ನಿಮ್ಮ ರಾಜಕೀಯ ಬೆಳವಣಿಗಾಗಿ ಜನ ಹಿತ ಬಿಟ್ಟು ಅವಕಾಶವಾದಿ ರಾಜಕಾರಣ ಮಾಡಿದರೆ, ಅದು ರಾಜಕೀಯ ಬೆಳವಣಿಗೆ ಆಗಲ್ಲ. ರಾಜಕೀಯ ಅಂತ್ಯ ಆಗುತ್ತದೆ. ಚೀನಾ ಪ್ರಶ್ನಿಸುವ ಧೈರ್ಯ ಇಲ್ಲ. ಇದು ಚೀನಾದ ಜೊತೆಗಿನ ಹೊಂದಾಣಿಕೆಯ ಒಳಗುಟ್ಟಾ ಎಂದು ಪ್ರಶ್ನಿಸಿದರು.
ಇನ್ನು 54 ವರ್ಷ ದೇಶವನ್ನು ಕಾಂಗ್ರೆಸ್ ಆಳ್ವಿಕೆ ಮಾಡಿತ್ತು. ಅಷ್ಟು ವರ್ಷ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಿಲ್ಲ. ಈಗ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.









