ರಾಜ್ಯದಲ್ಲಿ ಒಟ್ಟು 250 ಜನರಿಗೆ ಫಂಗಸ್ : ಸುಧಾಕರ್
ಹುಬ್ಬಳ್ಳಿ : ರಾಜ್ಯದಲ್ಲಿ ಒಟ್ಟಾರೆ 250 ಜನ ಫಂಗಸ್ ಸೋಂಕಿತರಿದ್ದಾರೆ. ಸ್ಟಿರಾಯ್ಡ್ ಅಧಿಕ ಬಳಕೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ, ಫಂಗಸ್ ಇನ್ಫೆಕ್ಷನ್ ಪ್ರಮಾಣ ಹೆಚ್ಚಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಬ್ಲ್ಯಾಕ್ ಫಂಗಸ್ ಹತೋಟಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.
ಫಂಗಸ್ ಚಿಕಿತ್ಸೆಗೆ ಅವಶ್ಯವಿರೋ 14 ಸಾವಿರ ವೇಲ್ಸ್ ಔಷಧ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಇದರಲ್ಲಿ ರಾಜ್ಯಕ್ಕೂ ಔಷಧ ಕಳುಹಿಸಿಕೊಡೋದಾಗಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ಫಂಗಸ್ ಬಾಧೆಗೊಳಗಾದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಇದರಲ್ಲಿ ಬ್ಲ್ಯಾಕ್, ವೈಟ್ ಫಂಗಸ್ ಅಂತಿಲ್ಲ ಫಂಗಸ್ ಇನ್ಫೆಕ್ಷನ್ ಇದೆ. ಫಂಗಸ್ ಎಕ್ಸಪರ್ಟ್ ಗಳನ್ನೊಳಗೊಂಡ ಐವರ ಸಮಿತಿ ರಚಿಸಲಾಗಿದೆ.
ಫಂಗಸ್ ಇನ್ಫೆಕ್ಷನ್ ಗೆ ಕಾರಣವಾದ ಅಂಶಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಅವರು ಈಗಾಗಲೇ ಪ್ರಾಥಮಿಕ ವರದಿಯನ್ನೂ ನೀಡಿದ್ದು, ಹ್ಯುಮಿಡಿಫೈಯರ್ ಗಳಿಗೆ ಡಿಸ್ಟಿಲ್ಡ್ ನೀರಿನ ಬದಲಿಗೆ ನಳದ ನೀರು ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ.
ಅದರ ಜೊತೆ ಸ್ಟಿರಾಯ್ಡ್ ಬಳಕೆ ಮತ್ತಿತರ ಕಾರಣಗಳಿಂದ ಫಂಗಸ್ ಬೆಳವಣಿಗೆಯಾಗಿದೆ ಎಂದು ಸಮಿತಿ ಕೆಲವೊಂದು ಸಲಹೆಗಳನ್ನೂ ನೀಡಿದೆ ಎಂದು ಮಾಹಿತಿ ನೀಡಿದರು.









