ಭಾರತದಲ್ಲಿ ಆಗಸ್ಟ್ ನಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ..!
ನವ ದೆಹಲಿ : ದೇಶದಲ್ಲಿ ಕೊರೊನಾ 2ನೇ ಅಲೆ ಭಯಾನಕ ಸ್ವರೂಪ ಪಡೆದಿದ್ದು, ದಿನೇ ದಿನೇ ಸೋಂಕಿತರು ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ೀ ನಡುವೆ ಅನೇಕರು ಭಯದಿಂದಲೇ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳು ನಡೆಯುತ್ತಿದೆ..
ದೇಶದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಭಯದಲ್ಲೇ ಪ್ಯಾನಿಕ್ ಆಗುತ್ತಿದ್ದಾರೆ. ಸಣ್ಣ ನೆಗಡಿ , ಜ್ವರ ಕಾಣಿಸಿಕೊಂಡ್ರೂ ತಮಗೆ ಸೋಂಕಿದೆ ಎಂದು ಹೆದರಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ದೇಶದಲ್ಲಿ ಲಸಿಕೆಯ ಕೊರತೆಯೂ ಉಂಟಾಗಿದೆ.. ಈ ನಡುವೆ ಸ್ಪಟ್ನಿಕ್ ವಿ ಆಯಂಟಿ ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡಲು ರಷ್ಯಾ ಭಾರತಕ್ಕೆ ಶೀಘ್ರದಲ್ಲೇ ಅನುಮತಿಸಲಿದೆ ಎಂಬ ವಿಚಾರ ತಿಳಿದುಬಂದಿದೆ.
ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಭಾರತ ತಯಾರಿ ಮಾಡಿಕೊಳ್ಳುತ್ತಿದ್ದು, ಬರುವ ಒಂದೆರಡು ವರ್ಷಗಳಲ್ಲಿ ಅಂದರೇ ಅಂದಾಜು ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾಋದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕುರಿತಾಗಿ ಸೈಂಟ್ ಪೀಟರ್ ಬರ್ಗ್ಸ್ ನಲ್ಲಿ ಸ್ಥಳಿಯ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಷ್ಯಾದ ಭಾರತೀಯ ರಾಯಭಾರಿ ಡಿ ಬಾಲಾ ವೆಂಕಟೇಶ್ ವರ್ಮಾ, ಶ್ವಾದ್ಯಂತ ಸರಬರಾಜು ಮಾಡುವ ಸ್ಪುಟ್ನಿಕ್ ವಿ ಲಸಿಕೆಯ ಶೇಕಡಾ 65 ರಿಂದ 70 ರಷ್ಟನ್ನು ಭಾರತದಲ್ಲಿಯೇ ಉತ್ಪಾದಿಸಲಾಗುತ್ತದೆ.
ರಷ್ಯಾ ಸರ್ಕಾರ ಈಗಾಗಲೇ ಈ ತಿಂಗಳ 1 ರಿಂದ 2,10,000 ಡೋಸ್ ಲಸಿಕೆಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ಕಳುಹಿಸಿದೆ. ಇನ್ನೂ ಮೂರು ಮಿಲಿಯನ್ ಡೋಸ್ ಲಸಿಕೆ ಶೀಘ್ರದಲ್ಲೇ ಭಾರತಕ್ಕೆ ತಲುಪಲಿವೆ ಎಂದು ಹೇಳಿದ್ದಾರೆ. ಜೂನ್ ಕೊನೆಯ ವಾರದ ವೇಳೆಗೆ ಐದು ಲಕ್ಷ ಡೋಸ್ ಗಳನ್ನು ಭಾರತಕ್ಕೆ ಕಳುಹಿಸುವ ಗುರಿಯನ್ನು ರಷ್ಯಾ ಸರ್ಕಾರ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








