ಇಂದಿನಿಂದ ಜೂನ್ 7 ವರೆಗೂ ಜನತಾ ಲಾಕ್ ಡೌನ್ 2.0
ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಜನತಾ ಲಾಕ್ ಡೌನ್ 2.0 ಜಾರಿಯಲ್ಲಿರಲಿದೆ. ಮೇ 10 ರಂದು ಘೋಷಿಸಿದ್ದ ಲಾಕ್ ಡೌನ್ ಇಂದಿಗೆ ಅಂತ್ಯವಾಗಬೇಕಿತ್ತು.
ಆದ್ರೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ 14 ದಿನಗಳ ಕಾಲ ಕರುನಾಡು ಸ್ತಬ್ದವಾಗಿರಲಿದೆ.
ಲಾಕ್ ಡೌನ್ 2.0 ಸ್ವರೂಪವನ್ನು ಆಯಾಯ ಜಿಲ್ಲಾಡಳಿತಗಳು ನಿರ್ಧರಿಸಲಿವೆ. ಹೀಗಾಗಿ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಲಾಕ್ ಡೌನ್ ನಿಯಮಗಳಿವೆ.
ಕೆಲ ಜಿಲ್ಲೆಗಳಲ್ಲಿ ಒಂದೆರಡು ದಿನಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದೆ.
ಇನ್ನುಳಿದಂತೆ ವಿಮಾನ ಮತ್ತು ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ಇದೆ. ದಿನಸಿ ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಸಮಯ ನೀಡಲಾಗಿದೆ.
ಅಂದಹಾಗೆ ರಾಜ್ಯದಲ್ಲಿ ಜನತಾ ಲಾಕ್ ಡೌನ್ ಘೋಷಣೆ ಬಳಿಕ ಕೋವಿಡ್ ಸೋಂಕಿತರ ಪ್ರಮಾಣ ಇಳಿಕೆ ಆಗ್ತಿದೆ.
ನಿನ್ನೆ ರಾಜ್ಯದಲ್ಲಿ ದಿನದ ಒಟ್ಟು ಸೋಂಕಿನ ಪ್ರಮಾಣ 25,979ಕ್ಕೆ ಇಳಿದಿದ್ದು, ಗುಣಮುಖರಾದ ಸೋಂಕಿತರು 35,573. ಆದ್ರೆ ನಿನ್ನೆ ಒಂದೇ ದಿನ ರಾಜ್ಯದಲ್ಲಿ 626 ಮಂದಿ ಸಾವನ್ನಪ್ಪಿದ್ದಾರೆ.