ಕರಾವಳಿಯಲ್ಲಿ ಮೀನುಗಾರಿಕೆಗೆ 61 ದಿನಗಳ ಕಾಲ ನಿರ್ಬಂಧ – ರಾಜ್ಯ ಸರ್ಕಾರದ ಅಧಿಸೂಚನೆ
ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಒಟ್ಟು 61 ದಿನಗಳ ಕಾಲ ಮೀನುಗಾರಿಕೆಗೆ ರಾಜ್ಯ ಸರ್ಕಾರವು ನಿರ್ಬಂಧ ಹೇರಿದೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕರ್ನಾಟಕದ ಕಡಲ ಮೀನುಗಾರಿಕೆ ನಿಯಣತ್ರಣ ಕಾಯ್ದೆ ಅನ್ವಯ ಕರಾವಳಿ ಭಾಗದಲ್ಲಿ ಯಾವುದೇ ಬಲೆಗಳು ಅಥವ ಇತರೇ ಯಾವುದೇ ರೀತಿಯಾದ ಸಾಧನಗಳನ್ನ ಉಪಯೋಗಿಸಿ ಮೀನುಗಾರಿಕೆ ನಡೆಸುವಂತಿಲ್ಲ.. ಯತೀಕೃತ ದೋಣಿಗಳ 10 HP ಸಾಮಸರ್ಥ್ಯಕ್ಕಿಂತ ಮೇಲ್ಪಟ್ಟ ಇನ್ ಬೋರ್ಡ್ ಹಾಗೂ ಔ2ಟ್ ಬೋರ್ಡ್ ಯಂತ್ರಣಗಳನ್ನ ಅಳಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರವು ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಗಳನ್ನ ನಿಷೇಧಿಸಲಾಗಿದೆ..
ಈ ನಿರ್ಬಂಧನವು ಜೂನ್ . 1 ರಿಂದ ಜುಲೈ 31 ಅಂದ್ರೆ 61 ದಿನಗಳ ಕಾಲ ವಿರಲಿದೆ.. ಇನ್ನೂ ದೋಣಿಯನ್ನ ಸಾಗಿಸುವ ಉದ್ದೇಶದಿಂದ 10 HP ಸಾಮರ್ಥ್ಯದ ಮೋಟಾರಿಕೃತ ದೋಣಿ ಹಾಗೂ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನ ಕೈಗೊಳ್ಳಲು ಅನುಮತಿ ನೀಡಲಾಗಿದೆ..
ಇನ್ನೂ ಸರ್ಕಾರದ ಆದೇಶ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರಿಗೆ 1986ರ ಕಾಯ್ದೆಯಡಿ ದಂಢ ವಿಧಿಸಬಹುದಾಗಿದೆ.. ಅಲ್ಲದೇ 1 ವರ್ಷದ ವರೆಗಿನ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗಿರುತ್ತಾರೆ. ಮೀನುಗಾರಿಕಾ ಇಲಾಖೆ ಈ ಬಗ್ಗೆ ಪ್ರಕಟನೆ ಹೊರರಡಿಸಿದ್ದು, ಈ ಆದೇಶವನ್ನ ಎಲ್ಲಾ ಮೀನುಗಾರರು ಪಾಲಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಕೇಂದ್ರ ಕೃಷಿ , ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯದ ಆದೇಶದಂತೆ ರಾಜ್ಯವೂ ಸೇರಿದಂತೆ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳ ವಿಶೇಷ ಆರ್ಥಿಕ ವಲಯ ಜಲಪ್ರದೇಶದಲ್ಲಿ ಜೂನ್. 1 ರಿಂದ ಜುಲೈ 31 ರವರೆಗೂ ಏಕ ರೂಪದ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.