ಕೋವಿಡ್ ಗೆ 2 ಔಷಧಿಗಳ ಅಭಿವೃದ್ದಿಪಡಿಸಿದ ಆಸ್ಟ್ರೇಲಿಯ ವಿಜ್ಞಾನಿಗಳು
ವಿಶ್ವಾದ್ಯಂತ ಕೊರೊನಾ ಆರ್ಭಟವಿದ್ದು, ಲಸಿಕೆಗಳ ಪ್ರಯೋಗವು ಮುಂದುವರೆದಿದೆ.. ಈ ನಡುವೆ ಆಸ್ಟ್ರೇಲಿಯಾದ ವಿಜ್ಞಾನಿಗಳು ಎರಡು ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸೋಂಕಿಗೆ ಒಳಪಟ್ಟವರಿಗೆ ರೋಗ ತೀವ್ರವಾಗಿ ಬಾಧಿಸದಂತೆ ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಕ್ಯೂಐಎಂಆರ್ ಬರ್ಘೋಫರ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಂಶೋಧಕರು ಅಮೈನೊ ಆಮ್ಲ ಸರಪಣಿ ಆಧಾರಿತ ಔಷಧಿಗಳನ್ನ ಅಭಿವೃದ್ಧಿಪಡಿಸಿದ್ದಾರೆ. ಇದು ಫ್ರಾನ್ಸ್ ನ ಐಡಿಎಂಐಟಿ ಪ್ರಯೋಗಾಲಯದಲ್ಲಿ ‘ಹ್ಯಾಮ್‌ಸ್ಟರ್’ಗಳ ಮೇಲೆ ಪರೀಕ್ಷಿಸಲಾಗುತ್ತಿದೆ.
ಅಲ್ಲದೇ ಈ ಔಷಧಗಳು ವಿಷಕಾರಿಯಲ್ಲ, ಆದರೆ ಕೆಲ ಅಡ್ಡ ಪರಿಣಾಮಗಳನ್ನು ಹೊಂದಿವೆ’ ಎಂಬುದು ಔಷಧಿಗಳ ಪ್ರಾರಂಭಿಕ ಫಲಿತಾಂಶದಲ್ಲಿ ಗೊತ್ತಾಗಿದೆ ಎಂದು ವರದಿಯಾಗಿದೆ. ‘ನೇಚರ್ ಸೆಲ್ ಡಿಸ್ಕವರಿ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಇನ್ನೂ ಪೆಪ್ಟೈಡ್ ಆಧಾರಿತ ಮೊದಲ ಔಷಧಿಯು ಲಸಿಕೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ನೆರವಾಗಲಿದ್ದು, 2ನೇ ಔಷಧಿಯು ಸೋಂಕಿತರ ಕೋಶಗಳಲ್ಲಿ ವೈರಾಣು ಹರಡುವುದನ್ನು ನಿಲ್ಲಿಸುತ್ತದೆ ಸಂಶೋಧಕರು ಅಭಿಪ್ರಾಯ ತಿಳಿಸಿದ್ಧಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








