`ಯೋಗೇಶ್ವರ್ ಕಪ್ಪೆ’ಯಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ : ಅಪ್ಪಚ್ಚು ರಂಜನ್
ಮಡಿಕೇರಿ : ಸಿ.ಪಿ.ಯೋಗೇಶ್ವರ್ ಯಾರವನು..? ಯೋಗೇಶ್ವರ್ ಕಪ್ಪೆಯಂತೆ ದಿನಕ್ಕೊಂದು ಪಾರ್ಟಿಗೆ ಹಾರುತ್ತಾರೆ ಅಂತ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಾಗ್ದಾಳಿ ನಡೆಸಿದ್ದಾರೆ.
ಸಿ.ಪಿ.ಯೋಗೇಶ್ವರ್ ದೆಹಲಿಗೆ ಭೇಟಿ ನೀಡಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ ಅನ್ನೋ ವಿಚಾರವಾಗಿ ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಪ್ಪಚ್ಚು ರಂಜನ್, ಸಿ.ಪಿ ಯೋಗೇಶ್ವರ್ ಯಾರವನು..?
ಯೋಗೇಶ್ವರ್ ದಿನಕ್ಕೊಂದು ಪಾರ್ಟಿಗೆ ಹೋಗುತ್ತಾರೆ. ಅವರನೆಲ್ಲಾ ಕಟ್ಟಿಕೊಂಡು ಅವರ ಹಿಂದೆ ಯಾರಾದ್ರು ಹೋಗುತ್ತಾರಾ ಎಂದು ಪ್ರಶ್ನಿಸಿದರು.
ಅವರ ನಾಯಕತ್ವದಲ್ಲಿ ನಾವ್ಯಾರು ಹೋಗೋದಿಲ್ಲಾ. ಯೋಗೇಶ್ವರ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು ಸಚಿವರಾಗಿದ್ದರು. ಇದೀಗ ಪುನಃ ಬಿಜೆಪಿಗೆ ಬಂದು ಸಚಿವರಾಗಿದ್ದಾರೆ ಎಂದು ಗರಂ ಆದರು.
ಇನ್ನು ಯೋಗೇಶ್ವರ್ ಅಂತವರೆಲ್ಲ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಕಪ್ಪೆಯಂತೆ ಹಾರುತ್ತಾರೆ.
ಅವರನ್ನೆಲ್ಲಾ ಪಕ್ಷದಿಂದಲೇ ವಜಾ ಮಾಡಬೇಕು. ಅದಕ್ಕೆ ಬೇಕಾದ್ರೆ ನಾನೂ ಸಹಿ ಮಾಡಿಕೊಡುತ್ತೇನೆ ಎಂದು ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.










