ಸಂಸದರು ಹೇಳುವ ಮಾತನ್ನ ಎಲ್ಲರು ಕೇಳಬೇಕು : ಎಸ್.ಟಿ.ಸೋಮಶೇಖರ್ S T Somashekhar
ಮೈಸೂರು : ಶಾಸಕರು, ಸಂಸದರು ಹೇಳುವ ಮಾತನ್ನ ನಾನೂ ಕೇಳಬೇಕು, ಬೇರೆಯವ್ರು ಕೇಳಬೇಕು ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಸಂಸದ ಪ್ರತಾಪ್‍ಸಿಂಹ , ರೋಹಿಣಿ ಸಿಂಧೂರಿ ನಡುವೆ ಜಟಾಪಟಿ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರತಾಪ್‍ಸಿಂಹ ಪರ ಬ್ಯಾಟ್ ಬೀಸಿದರು.
ಕೋವಿಡ್ ನಿಯಂತ್ರಣಕ್ಕೆ ಜನಪ್ರತಿನಿಧಿಗಳಿಗೆ ಹೇಳುವ ಅಧಿಕಾರ ಇದೆ. ಪಾಲಿಸುವ ಬದ್ಧತೆ ನನಗೂ ಇದೆ, ಅಧಿಕಾರಿಗಳೂ ಪಾಲಿಸಬೇಕು.
ಇದರಲ್ಲಿ ವೈಯುಕ್ತಿಕ ಏನೂ ಇಲ್ಲ ಎಂದು ರೋಹಿಣಿ ಸಿಂಧೂರಿ ನಡೆಗೆ ಸಚಿವ ಸೋಮಶೇಖರ್ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಟಾಸ್ಕ್‌ಫೋರ್ಸ್ ರಚನೆಗೆ ಹೆಚ್.ವಿಶ್ವನಾಥ್ ಟೀಕೆ ಬಗ್ಗೆ ಮಾತನಾಡಿ, ಟಾಸ್ಕ್‌ಫೋರ್ಸ್‌ಗೆ ಅಧಿಕಾರ ಇಲ್ಲ ಎನ್ನುವುದಾದರೆ ಇವರಿಗೆ ಹೇಳುವ ಅಧಿಕಾರ ಏನಿದೆ.
ಇವರಿಗೆ ಅಧಿಕಾರ ಕೊಟ್ಟವರು ಯಾರು.? ಅಧಿಕಾರಕ್ಕಾಗಿ ಟಾಸ್ಕ್‌ಫೋರ್ಸ್ ರಚಿಸಿಲ್ಲ, ಸೇವೆಗಾಗಿ ರಚನೆ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.









