ಬಂಗಾಳದಲ್ಲಿರುವ ಈ ಘೋಸ್ಟ್ ಸ್ಟೇಷನ್ ನ ಹಿಂದಿನ ಕಥೆಯೇನು…?
ಬಂಗಾಳದ ಘೋಸ್ಟ್ ಸ್ಟೇಷನ್… 1960ರ ದಶಕದಲ್ಲಿ ಸ್ಥಾಪನೆಯಾದ ಈ ನಿಗೂಢ ರೈಲು ನಿಲ್ದಾಣವಿರುವುದು ಪುರುಲಿಯಾ ಜಿಲ್ಲೆಯಲ್ಲಿ. ಆ ಕಾಲದಲ್ಲಿ ಸ್ಥಳೀಯ ಬುಡಕಟ್ಟು ರಾಣಿ, ಲಚನ್ ಕುಮಾರಿ ಬೆಗುಂಕೋಡರ್ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿದ್ದರು. ಸ್ವಲ್ಪ ಸಮಯದ ನಂತರ, ರಾಂಚಿ ಮಾರ್ಗದಲ್ಲಿ ಬೆಗುನ್‌ಕೋಡರ್ ರೈಲ್ವೇ ನಿಲ್ದಾಣ ಅತ್ಯಂತ ಪ್ರಾಮುಖ್ಯತೆ ಪಡೆಯಿತು..
ಎಲ್ಲವೂ ಉತ್ತಮವಾಗಿಯೇ ಇತ್ತು.. ಆದ್ರೆ 1967 ರ ನಂತರ ಅಲ್ಲಿನ ಸ್ಟೇಷನ್ ಮಾಸ್ಟರ್ ಕಣ್ಣಿಗೆ ದೆವ್ವ ಭೂತ ಕಾಣಿಸಿಕೊಂಡಿದ್ದು, ವಿಚಿತ್ರ ಅನುಭವವನ್ನ ಹೇಳಿಕೊಂಡಿದ್ದರು. ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಸ್ಟೇಷನ್ ಮಾಸ್ಟರ್ ಹಾಗೂ ಆತನ ಕುಟುಂಬದವರು ಶವವಾಗಿ ಪತ್ತೆಯಾಗಿದ್ದರು.. ಅಲ್ಲಿಂದ ಈ ನಿಲ್ದಾಣದ ಬಗ್ಗೆ ಜನರಲ್ಲಿ ಆತಂಕ ಶುರುವಾಗಿತ್ತು.. ಅಷ್ಟೇ ಅಲ್ಲ ಇದಾದ ನಂತರ ಜನ ಈ ಸ್ಟೇಷನ್ ನಲ್ಲಿ ಕೆಲಸ ಮಾಡೋದಕ್ಕೂ ಹೆದರಿಕೊಳ್ಳುವಂತಾಯ್ತು,, ನಂತರ ಅಲ್ಲಿ ಕೆಲಸ ಮಾಡ;ಲು ನಿರಾಸಿದ್ದರು.. ಕ್ರಮೇಣ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತಾ ಹೋಯ್ತು..
ಸಂಜೆಯಾದ ನಂತರ ಅಂದ್ರೆ ಕತ್ತಲಾದ ನಂತರವಂತೂ ಗ್ರಮಾಸ್ಥರು ಈ ರೈಲು ನಿಲ್ದಾಣದ ಕಡೆ ತಲೆ ಹಾಕುವುದಿಲ್ಲ. ಹೀಗೆಯೇ ಮುಂದುವರೆದು ರೈಲು ನಿಲ್ದಾಣ ಸಂಪೂರ್ಣವಾಗಿ ಬಂದ್ ಆಗಿತ್ತು.. ಆದ್ರೆ 2009 ರಲ್ಲಿ ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ಹಾಗೂ ಅಂದಿನ ರೈಲ್ವೇ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಈ ನಿಲ್ದಾಣವನ್ನ ಮತ್ತೊಮ್ಮೆ ಪುನರಾರಂಭಿಸಿದ್ರು. ಬೇಗುಂಕೋಡೂರ್ ನ ಈ ಘೋಸ್ಟ್ ಸ್ಟೇಷನ್ ನಲ್ಲಿ ಒಟ್ಟು 5 ರೈಲುಗಳು ನಿಲ್ಲಿಸುತ್ತವೆ.. ಆದ್ರೆ ಲೋಕಲ್ ರೈಲುಗಳು ಈಗಲೂ ಸೂರ್ಯಾಸ್ತದ ಬಳಿಕ ಈ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ನಿರಾಕರಿಸುತ್ತಾರೆ. ಆದ್ರೆ ಅಡ್ವೆಂಚರಸ್ ಥ್ರಿಲ್ಲಿಂಗ್ ಬೇಕೋ ಅನ್ನುವಂತಹವವರಿಗೆ ಇದು ಒಳ್ಳೆ ಸ್ಪಾಟ್.