ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..! ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

1 min read

kerala – munar

ದೇವರ ನಾಡು ಕೇರಳ, ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..! ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

ಕೇರಳ.. ದೇವರ ಸ್ವಂತ ನಾಡೆಂದೇ ಖ್ಯಾತಿ ಗಳಿಸಿದೆ. ಅತ್ಯುತ್ತಮ ಗಿರಿಧಾಮಗಳು, ಸಮುದ್ರ ತೀರಗಳು ಸೇರಿದಂತೆ ರಮಣೀಯ ಸೌಂದರ್ಯವನ್ನು ತನ್ನೊಡಲಲ್ಲಿ ಇರಿಸಿಕೊಂಡಿದೆ. ದಕ್ಷಿಣ ಭಾರತದ ಜನಪ್ರಿಯ ಗಿರಿಧಾಮಗಳಲ್ಲೊಂದಾದ ಮುನ್ನಾರ್ ಇರುವುದು ಈ ದೇವರ ನಾಡಿನಲ್ಲಿಯೇ.

ಸಮುದ್ರ ಮಟ್ಟದಿಂದ 1600 ಮೀ. ಎತ್ತರವಿರುವ ಈ ಗಿರಿ ಧಾಮವು ಹಿಂದೊಮ್ಮೆ ದಕ್ಷಿಣಭಾರತದಲ್ಲಿ ಬ್ರಿಟೀಶ್ ಸರ್ಕಾರದ ಬೇಸಿಗೆಕಾಲದ ರೆಸಾರ್ಟ್ ಆಗಿತ್ತು.

ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..!

ಇಲ್ಲಿನ ಅರಣ್ಯಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಕಂಡುಬುರುವ ವಿನೂತನ ಸಸ್ಯವರ್ಗಗಳು ನೀಲಕುರಿಂಜಿಯಾಗಿದೆ. ಈ ಹೂವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಬೆಟ್ಟಗಳನ್ನು ನೀಲವರ್ಣದಲ್ಲಿ ಮುಳುಗಿಸುತ್ತವೆ, ಇದು ಮುಂದೆ 2018ರಲ್ಲಿ ಅರಳಲಿದೆ. ಮುನ್ನಾರ್ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ ಶೃಂಗವನ್ನು ಹೊಂದಿದೆ. ಅನಾಮುಡಿಯು 2695 ಮೀ. ಗಿಂತಲೂ ಎತ್ತರದ ಶಿಖರವಾಗಿದೆ. ಅನಾಮುಡಿಯು ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿರುವ ಸ್ಥಳ. ಇನ್ನು ಮುನ್ನಾರ್ ಎಂಬ ಹೆಸರು “ಮೂರು ನದಿ”ಗಳನ್ನು ಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಮುದಿರಪುಜ, ನಲ್ಲತನ್ನಿ ಮತ್ತು ಕುಂಡಲಿ ನದಿಗಳ ಸಂಗಮವನ್ನು ಉಲ್ಲೇಖಿಸುತ್ತದೆ.

ಇಲ್ಲಿನ ಹವಾಗುಣದಿಂದಾಗಿ ಪ್ರವಾಸಿ ತಾಣಗಳ ವೀಕ್ಷಣೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಅಲ್ಲದೆ ಈ ಸ್ಥಳವು ಚಾರಣಿಗರಿಗೆ ಮತ್ತು ಬೈಕ್ ಸವಾರರಿಗೆ ಸ್ವರ್ಗ ಸಮಾನವಾಗಿದೆ. ಇಲ್ಲಿರುವ ಹಲವಾರು ಕಡಿದಾದ ಬೆಟ್ಟಗಳು ಮತ್ತು ರಸ್ತೆಗಳು ಇಂತಹವರುಗಳಿಗಾಗಿ ಅದ್ಭುತವಾದ ಅವಕಾಶಗಳನ್ನು ಒದಗಿಸುತ್ತವೆ.  ಪ್ರವಾಸಿಗರು ಇಲ್ಲಿನ ಟೀ ತೋಟಗಳ ನಡುವೆ ಹಾಗು ಹುಲ್ಲುಗಾವಲುಗಳಲ್ಲಿ ಸಾಗುವ ದಾರಿಗಳಲ್ಲಿ ಸುಮ್ಮನೆ ಒಂದು ದೀರ್ಘವಾದ ನಡಿಗೆಯನ್ನು ಕೈಗೊಳ್ಳಬಹುದು.

ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

ಮುನ್ನಾರ್ ತನ್ನ ಟೀ ಪ್ಲಾಂಟೇಶನ್‌‌ಗಳ ವಿಷಯದಲ್ಲಿ ತನ್ನದೇ ಆಗಿರುವ ಮಹತ್ವವನ್ನು ಹೊಂದಿದೆ. ಈ ಮಹತ್ವವನ್ನು ಗಣನೆಗೆ ತೆಗೆದುಕೊಂಡಾಗ ಮತ್ತು ಕೇರಳದ ಎತ್ತರ ಪ್ರದೇಶಗಳಲ್ಲಿ ಟೀ ಪ್ಲಾಂಟೇಶನ್‌ನ ಸಂತತಿ ಮತ್ತು ಬೆಳವಣಿಗೆಯ ವಿಚಾರದಲ್ಲಿ ಅವಿಸ್ಮರಣೀಯ ಮತ್ತು ಆಸಕ್ತಿದಾಯಕವಾದ ವಿಚಾರಗಳನ್ನು ತೆರೆದಿಡುತ್ತದೆ.  ಈ ಪ್ರಾಚ್ಯ ವಸ್ತು ಸಂಗ್ರಹಾಲಯವು ಕಲಾತ್ಮಕ ವಸ್ತುಗಳ, ಅಪರೂಪದ ಫೋಟೊಗ್ರಾಫ್‌ಗಳ ಮತ್ತು ಯಂತ್ರಗಳನ್ನು ಇಲ್ಲಿ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.  ಇವೆಲ್ಲವೂ ಮುನ್ನಾರ್‌ನಲ್ಲಿ ಟೀ ಪ್ಲಾಂಟೇಶನ್‌ನ ಮೂಲ ಮತ್ತು ಅದರ ಬೆಳವಣಿಗೆಯ ಬಗ್ಗೆ ಸವಿಸ್ತಾರವಾದ ಕಥೆಯನ್ನೇ ಹೇಳುತ್ತವೆ. ಈ ವಸ್ತು ಸಂಗ್ರಹಾಲಯವು  ಟಾಟಾ ಟೀಯ ನಲ್ಲಥನ್ನಿ ಎಸ್ಟೇಟ್‌ನಲ್ಲಿದೆ.

ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಮುನ್ನಾರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್ ಗಳ ತವರಾಗಿದೆ. ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರವಾದ  ಅನಮುಡಿ ಶಿಖರವು ಈ ರಾಷ್ಟ್ರೀಯ ಉದ್ಯಾನವನದಲ್ಲಿದೆ.

ಇದನ್ನು ಹೊರತುಪಡಿಸಿ ಮುನ್ನಾರ್ ಹಲವಕ್ಕೆ ಪ್ರಸಿದ್ಧಿ ಹೊಂದಿದೆ. ಮುನ್ನಾರ್ ನಿಂದಸುಮಾರು15 ಕಿ.ಮೀದೂರದಲ್ಲಿಪ್ರಸಿದ್ಧಎಕೋಪಾಯಿಂಟ್ ಇದೆ. ಈ ಸರೋವರದ ಬಳಿ ನಿಂತು ಮಾತನಾಡಿದರೆ ನಮಗೆ ಪ್ರತಿಧ್ವನಿ ಕೇಳಿಬರುತ್ತದೆ.ಇಲ್ಲಿ ವರ್ಷಪೂರ್ತಿಪ್ರವಾಸಿಗರನ್ನುನೋಡಬಹುದು. ಸುಮಾರು600 ಅಡಿ ಎತ್ತರದಲ್ಲಿರುವ ಎಕೋಪಾಯಿಂಟ್ ರಿಲ್ಯಾಕ್ಸ್ ಆಗಲು ಅತ್ಯುತ್ತಮ ತಾಣ. ಇನ್ನು ಖ್ಯಾತ ಟೀ ಕ‌ಂಪನಿ ಕಣ್ಣನ್ ದೇವನ್ ಇರುವುದು ಇಲ್ಲಿಯೇ.kerala - munar

ಮುನ್ನಾರ್‌ನ ಸಮೀಪದಲ್ಲಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಈ ಎರವಿಕುಲಮ್ ರಾಷ್ಟ್ರೀಯ ಉದ್ಯಾನವನವೂ ಒಂದಾಗಿದೆ. ಈ ಪಾರ್ಕ್ ತನ್ನ ಅಪರೂಪದ ಜೀವ ಸಂಕುಲ – ನೀಲಗಿರಿ ಕಾಡು ಮೇಕೆ ಅಥವಾ ನೀಲಗಿರಿ ಥಾರ್ ಗೆ ಅತ್ಯಂತ ಜನಪ್ರಿಯವಾಗಿದೆ. ಇದು 97 ಚದರ ಕಿಲೋಮೀಟರ್‌ಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಉದ್ಯಾನವನವು ಅಪರೂಪದ ಚಿಟ್ಟೆಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಸಂಕುಲಗಳ ಆಶ್ರಯ ತಾಣವೂ ಕೂಡ ಆಗಿದೆ.kerala - munar

ಮುನ್ನಾರಿಗೆ ಕೇರಳ ಮತ್ತು ತಮಿಳುನಾಡು ಎರಡು ರಾಜ್ಯಗಳಿಂದಲು ಸುಲಭವಾಗಿ ತಲುಪಬಹುದು. ಪ್ರವಾಸಿಗರು ಇಲ್ಲಿ ಹೋಟೆಲ್, ರೆಸಾರ್ಟುಗಳು, ಹೋಮ್- ಸ್ಟೇ ಮತ್ತು ವಿಶ್ರಾಂತಿ ಗೃಹಗಳಲ್ಲಿ ತಮಗೆ ಬೇಕಾದ ವಾಸ್ತವ್ಯ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು.

kerala - munar

ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳಯ ಹೇರಲಾಗಿದೆ. ಸದ್ಯಕ್ಕೇನಾದರೂ ಇಲ್ಲಿಗೆ ಭೇಟಿ ನೀಡುವವರಿದ್ದರೆ ಕೇರಳ ಪ್ರವಾಸೋದ್ಯಮ ಇಲಾಖೆ ಅಥವಾ ಸ್ಥಳೀಯ ಆಡಳಿತ ಇಲ್ಲವೇ ರೆಸಾರ್ಟ್ ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

kerala – munar

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd