ADVERTISEMENT
Saturday, May 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..! ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

Namratha Rao by Namratha Rao
June 4, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

kerala – munar

ದೇವರ ನಾಡು ಕೇರಳ, ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..! ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

Related posts

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

ವಿಪಕ್ಷ ನಾಯಕನಿಗೆ ಬಂಗಲೆ ನೀಡದ ಕಾಂಗ್ರೆಸ್ ಸರ್ಕಾರ: ಇದು ನಾಚಿಕೆಗೇಡಿನ ಸಂಗತಿ ಎಂದ ಅಶೋಕ್

May 23, 2026
ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜಿಸಿದ ಕ್ರಿಮಿನಲ್‌ಗಳಿಗೆ ಕ್ಲೀನ್ ಚಿಟ್: ಕಾಂಗ್ರೆಸ್ ವಿರುದ್ಧ ಸಚಿವೆ ಶೋಭಾ ವಾಗ್ದಾಳಿ

ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜಿಸಿದ ಕ್ರಿಮಿನಲ್‌ಗಳಿಗೆ ಕ್ಲೀನ್ ಚಿಟ್: ಕಾಂಗ್ರೆಸ್ ವಿರುದ್ಧ ಸಚಿವೆ ಶೋಭಾ ವಾಗ್ದಾಳಿ

May 23, 2026

ಕೇರಳ.. ದೇವರ ಸ್ವಂತ ನಾಡೆಂದೇ ಖ್ಯಾತಿ ಗಳಿಸಿದೆ. ಅತ್ಯುತ್ತಮ ಗಿರಿಧಾಮಗಳು, ಸಮುದ್ರ ತೀರಗಳು ಸೇರಿದಂತೆ ರಮಣೀಯ ಸೌಂದರ್ಯವನ್ನು ತನ್ನೊಡಲಲ್ಲಿ ಇರಿಸಿಕೊಂಡಿದೆ. ದಕ್ಷಿಣ ಭಾರತದ ಜನಪ್ರಿಯ ಗಿರಿಧಾಮಗಳಲ್ಲೊಂದಾದ ಮುನ್ನಾರ್ ಇರುವುದು ಈ ದೇವರ ನಾಡಿನಲ್ಲಿಯೇ.

ಸಮುದ್ರ ಮಟ್ಟದಿಂದ 1600 ಮೀ. ಎತ್ತರವಿರುವ ಈ ಗಿರಿ ಧಾಮವು ಹಿಂದೊಮ್ಮೆ ದಕ್ಷಿಣಭಾರತದಲ್ಲಿ ಬ್ರಿಟೀಶ್ ಸರ್ಕಾರದ ಬೇಸಿಗೆಕಾಲದ ರೆಸಾರ್ಟ್ ಆಗಿತ್ತು.

ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..!

ಇಲ್ಲಿನ ಅರಣ್ಯಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಕಂಡುಬುರುವ ವಿನೂತನ ಸಸ್ಯವರ್ಗಗಳು ನೀಲಕುರಿಂಜಿಯಾಗಿದೆ. ಈ ಹೂವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಬೆಟ್ಟಗಳನ್ನು ನೀಲವರ್ಣದಲ್ಲಿ ಮುಳುಗಿಸುತ್ತವೆ, ಇದು ಮುಂದೆ 2018ರಲ್ಲಿ ಅರಳಲಿದೆ. ಮುನ್ನಾರ್ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ ಶೃಂಗವನ್ನು ಹೊಂದಿದೆ. ಅನಾಮುಡಿಯು 2695 ಮೀ. ಗಿಂತಲೂ ಎತ್ತರದ ಶಿಖರವಾಗಿದೆ. ಅನಾಮುಡಿಯು ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿರುವ ಸ್ಥಳ. ಇನ್ನು ಮುನ್ನಾರ್ ಎಂಬ ಹೆಸರು “ಮೂರು ನದಿ”ಗಳನ್ನು ಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಮುದಿರಪುಜ, ನಲ್ಲತನ್ನಿ ಮತ್ತು ಕುಂಡಲಿ ನದಿಗಳ ಸಂಗಮವನ್ನು ಉಲ್ಲೇಖಿಸುತ್ತದೆ.

ಇಲ್ಲಿನ ಹವಾಗುಣದಿಂದಾಗಿ ಪ್ರವಾಸಿ ತಾಣಗಳ ವೀಕ್ಷಣೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಅಲ್ಲದೆ ಈ ಸ್ಥಳವು ಚಾರಣಿಗರಿಗೆ ಮತ್ತು ಬೈಕ್ ಸವಾರರಿಗೆ ಸ್ವರ್ಗ ಸಮಾನವಾಗಿದೆ. ಇಲ್ಲಿರುವ ಹಲವಾರು ಕಡಿದಾದ ಬೆಟ್ಟಗಳು ಮತ್ತು ರಸ್ತೆಗಳು ಇಂತಹವರುಗಳಿಗಾಗಿ ಅದ್ಭುತವಾದ ಅವಕಾಶಗಳನ್ನು ಒದಗಿಸುತ್ತವೆ.  ಪ್ರವಾಸಿಗರು ಇಲ್ಲಿನ ಟೀ ತೋಟಗಳ ನಡುವೆ ಹಾಗು ಹುಲ್ಲುಗಾವಲುಗಳಲ್ಲಿ ಸಾಗುವ ದಾರಿಗಳಲ್ಲಿ ಸುಮ್ಮನೆ ಒಂದು ದೀರ್ಘವಾದ ನಡಿಗೆಯನ್ನು ಕೈಗೊಳ್ಳಬಹುದು.

ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

ಮುನ್ನಾರ್ ತನ್ನ ಟೀ ಪ್ಲಾಂಟೇಶನ್‌‌ಗಳ ವಿಷಯದಲ್ಲಿ ತನ್ನದೇ ಆಗಿರುವ ಮಹತ್ವವನ್ನು ಹೊಂದಿದೆ. ಈ ಮಹತ್ವವನ್ನು ಗಣನೆಗೆ ತೆಗೆದುಕೊಂಡಾಗ ಮತ್ತು ಕೇರಳದ ಎತ್ತರ ಪ್ರದೇಶಗಳಲ್ಲಿ ಟೀ ಪ್ಲಾಂಟೇಶನ್‌ನ ಸಂತತಿ ಮತ್ತು ಬೆಳವಣಿಗೆಯ ವಿಚಾರದಲ್ಲಿ ಅವಿಸ್ಮರಣೀಯ ಮತ್ತು ಆಸಕ್ತಿದಾಯಕವಾದ ವಿಚಾರಗಳನ್ನು ತೆರೆದಿಡುತ್ತದೆ.  ಈ ಪ್ರಾಚ್ಯ ವಸ್ತು ಸಂಗ್ರಹಾಲಯವು ಕಲಾತ್ಮಕ ವಸ್ತುಗಳ, ಅಪರೂಪದ ಫೋಟೊಗ್ರಾಫ್‌ಗಳ ಮತ್ತು ಯಂತ್ರಗಳನ್ನು ಇಲ್ಲಿ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.  ಇವೆಲ್ಲವೂ ಮುನ್ನಾರ್‌ನಲ್ಲಿ ಟೀ ಪ್ಲಾಂಟೇಶನ್‌ನ ಮೂಲ ಮತ್ತು ಅದರ ಬೆಳವಣಿಗೆಯ ಬಗ್ಗೆ ಸವಿಸ್ತಾರವಾದ ಕಥೆಯನ್ನೇ ಹೇಳುತ್ತವೆ. ಈ ವಸ್ತು ಸಂಗ್ರಹಾಲಯವು  ಟಾಟಾ ಟೀಯ ನಲ್ಲಥನ್ನಿ ಎಸ್ಟೇಟ್‌ನಲ್ಲಿದೆ.

ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಮುನ್ನಾರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್ ಗಳ ತವರಾಗಿದೆ. ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರವಾದ  ಅನಮುಡಿ ಶಿಖರವು ಈ ರಾಷ್ಟ್ರೀಯ ಉದ್ಯಾನವನದಲ್ಲಿದೆ.

ಇದನ್ನು ಹೊರತುಪಡಿಸಿ ಮುನ್ನಾರ್ ಹಲವಕ್ಕೆ ಪ್ರಸಿದ್ಧಿ ಹೊಂದಿದೆ. ಮುನ್ನಾರ್ ನಿಂದಸುಮಾರು15 ಕಿ.ಮೀದೂರದಲ್ಲಿಪ್ರಸಿದ್ಧಎಕೋಪಾಯಿಂಟ್ ಇದೆ. ಈ ಸರೋವರದ ಬಳಿ ನಿಂತು ಮಾತನಾಡಿದರೆ ನಮಗೆ ಪ್ರತಿಧ್ವನಿ ಕೇಳಿಬರುತ್ತದೆ.ಇಲ್ಲಿ ವರ್ಷಪೂರ್ತಿಪ್ರವಾಸಿಗರನ್ನುನೋಡಬಹುದು. ಸುಮಾರು600 ಅಡಿ ಎತ್ತರದಲ್ಲಿರುವ ಎಕೋಪಾಯಿಂಟ್ ರಿಲ್ಯಾಕ್ಸ್ ಆಗಲು ಅತ್ಯುತ್ತಮ ತಾಣ. ಇನ್ನು ಖ್ಯಾತ ಟೀ ಕ‌ಂಪನಿ ಕಣ್ಣನ್ ದೇವನ್ ಇರುವುದು ಇಲ್ಲಿಯೇ.kerala - munar

ಮುನ್ನಾರ್‌ನ ಸಮೀಪದಲ್ಲಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಈ ಎರವಿಕುಲಮ್ ರಾಷ್ಟ್ರೀಯ ಉದ್ಯಾನವನವೂ ಒಂದಾಗಿದೆ. ಈ ಪಾರ್ಕ್ ತನ್ನ ಅಪರೂಪದ ಜೀವ ಸಂಕುಲ – ನೀಲಗಿರಿ ಕಾಡು ಮೇಕೆ ಅಥವಾ ನೀಲಗಿರಿ ಥಾರ್ ಗೆ ಅತ್ಯಂತ ಜನಪ್ರಿಯವಾಗಿದೆ. ಇದು 97 ಚದರ ಕಿಲೋಮೀಟರ್‌ಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಉದ್ಯಾನವನವು ಅಪರೂಪದ ಚಿಟ್ಟೆಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಸಂಕುಲಗಳ ಆಶ್ರಯ ತಾಣವೂ ಕೂಡ ಆಗಿದೆ.kerala - munar

ಮುನ್ನಾರಿಗೆ ಕೇರಳ ಮತ್ತು ತಮಿಳುನಾಡು ಎರಡು ರಾಜ್ಯಗಳಿಂದಲು ಸುಲಭವಾಗಿ ತಲುಪಬಹುದು. ಪ್ರವಾಸಿಗರು ಇಲ್ಲಿ ಹೋಟೆಲ್, ರೆಸಾರ್ಟುಗಳು, ಹೋಮ್- ಸ್ಟೇ ಮತ್ತು ವಿಶ್ರಾಂತಿ ಗೃಹಗಳಲ್ಲಿ ತಮಗೆ ಬೇಕಾದ ವಾಸ್ತವ್ಯ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು.

kerala - munar

ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳಯ ಹೇರಲಾಗಿದೆ. ಸದ್ಯಕ್ಕೇನಾದರೂ ಇಲ್ಲಿಗೆ ಭೇಟಿ ನೀಡುವವರಿದ್ದರೆ ಕೇರಳ ಪ್ರವಾಸೋದ್ಯಮ ಇಲಾಖೆ ಅಥವಾ ಸ್ಥಳೀಯ ಆಡಳಿತ ಇಲ್ಲವೇ ರೆಸಾರ್ಟ್ ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

kerala – munar

Tags: keralaLifestylemunarNaturetourismtravelling
ShareTweetSendShare
Join us on:

Related Posts

ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾರಾಮಯ್ಯ ಸಾಲದರಾಮಯ್ಯ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆರ್ ಅಶೋಕ್ ತೀವ್ರ ವಾಗ್ದಾಳಿ

ವಿಪಕ್ಷ ನಾಯಕನಿಗೆ ಬಂಗಲೆ ನೀಡದ ಕಾಂಗ್ರೆಸ್ ಸರ್ಕಾರ: ಇದು ನಾಚಿಕೆಗೇಡಿನ ಸಂಗತಿ ಎಂದ ಅಶೋಕ್

by Shwetha
May 23, 2026
0

ರಾಜ್ಯ ರಾಜಕಾರಣದಲ್ಲಿ ಈಗ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡದಿರುವ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ...

ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜಿಸಿದ ಕ್ರಿಮಿನಲ್‌ಗಳಿಗೆ ಕ್ಲೀನ್ ಚಿಟ್: ಕಾಂಗ್ರೆಸ್ ವಿರುದ್ಧ ಸಚಿವೆ ಶೋಭಾ ವಾಗ್ದಾಳಿ

ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜಿಸಿದ ಕ್ರಿಮಿನಲ್‌ಗಳಿಗೆ ಕ್ಲೀನ್ ಚಿಟ್: ಕಾಂಗ್ರೆಸ್ ವಿರುದ್ಧ ಸಚಿವೆ ಶೋಭಾ ವಾಗ್ದಾಳಿ

by Shwetha
May 23, 2026
0

ಬೆಂಗಳೂರು: ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗವನ್ನು ಅಪವಿತ್ರಗೊಳಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ...

ಮುಖ್ಯಮಂತ್ರಿ ಪಟ್ಟ ಕೊಟ್ಟರೆ ಮಾತ್ರ ಬಿಜೆಪಿಗೆ ವಾಪಸ್: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಶಾಸಕ ಯತ್ನಾಳ್ ಸ್ಪೋಟಕ ಹೇಳಿಕೆ

ಮುಸ್ಲಿಮರ ಓಲೈಕೆ ಅತಿರೇಕ: ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ

by Shwetha
May 23, 2026
0

ರಾಜ್ಯ ಸರ್ಕಾರ ಕೆಲ ಪ್ರಕರಣಗಳನ್ನು ಹಿಂಪಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರ ಓಲೈಕೆ ಅತಿಯಾಗಿ...

ಮೋದಿ ವಿರೋಧಿಸುವ ಭರದಲ್ಲಿ ದೇಶಕ್ಕೆ ಮುಜುಗರ ತರಬೇಡಿ: ಧ್ರುವ್ ರಾಠಿಗೆ ಚಳಿ ಬಿಡಿಸಿದ ನಟಿ ಗುಲ್ ಪನಾಗ್

ಮೋದಿ ವಿರೋಧಿಸುವ ಭರದಲ್ಲಿ ದೇಶಕ್ಕೆ ಮುಜುಗರ ತರಬೇಡಿ: ಧ್ರುವ್ ರಾಠಿಗೆ ಚಳಿ ಬಿಡಿಸಿದ ನಟಿ ಗುಲ್ ಪನಾಗ್

by Shwetha
May 23, 2026
0

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ವೇಳೆ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದ ಯೂಟ್ಯೂಬರ್ ಧ್ರುವ್ ರಾಠಿಗೆ ಬಾಲಿವುಡ್ ನಟಿ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (23-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 23, 2026
0

ದಿನ ಭವಿಷ್ಯ : 23-05-2026 ಮೇಷ ರಾಶಿ ಇಂದು ನಿಮಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಶನಿವಾರದ ಪ್ರಭಾವದಿಂದಾಗಿ ಹಳೆಯ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ಸಾಧಾರಣ ಲಾಭ ಇರಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram