ಫ್ರೆಂಚ್ ಓಪನ್ 2021 – ವಿಕ್ಟೋರಿಯಾಗೆ ಶಾಕ್.. ಕ್ವಾರ್ಟರ್ ಫೈನಲ್‍ಗೆ ಪಾಲೌ ಬಡೊಸಾ, ಅನಾಸ್ಟೆಸಿಯಾ..!
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಯುವ ಆಟಗಾರ್ತಿಯೇ ಕಾರುಬಾರು ನಡೆಸುತ್ತಿದ್ದಾರೆ. ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಸೆರೆನಾ ವಿಲಿಯಮ್ಸ್, ವಿಕ್ಟೋರಿಯಾ ಆಝಾರೆಂಕಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಈ ನಡುವೆ, ಫ್ರೆಂಚ್ ಓಪನ್ ಟೂರ್ನಿಯ ಮಾಜಿ ರನ್ನರ್ ಅಪ್ ಮಾರ್ಕೆಟಾ ವೊಂಡ್ರೋಸೊವಾ ಕೂಡ ಫ್ರಿ ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್ ನ ಪಾಲೌ ಬಡೊಸಾ ಅವರು 6-4, 3-6, 6-2ರಿಂದ ಮಾರ್ಕೆಟಾ ವೊಂಡ್ರೋಸೊವಾ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ಲೋವೆನಿಯಾದ ತಮಾರ ಝಿಡಾನ್ಸೆಕ್ 7-6, 6-1ರಿಂದ ರೋಮಾನಿಯಾದ ಸೊರಾನಾ ಕ್ರಿಸ್ಟಾ ಅವರನ್ನು ಮಣಿಸಿದ್ರು. ಈ ಮೂಲಕ ತಮಾರ ಝಿಡಾನ್ಸೆಕ್ ಅವರು ಸ್ಲೋವೆನಿಯಾ ಪರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಮತ್ತೊಂದು ಸಿಂಗಲ್ಸ್ ಪಂಂದ್ಯದಲ್ಲಿ ರಷ್ಯಾದ ಅನಾಸ್ಟೆಸಿಯಾ ಪಾವ್ಲಾಚುಂಕೊವಾ 5-7, 6-3, 6-2ರಿಂದ ಮಾಜಿ ನಂಬರ್ ವನ್ ಆಟಗಾರ್ತಿ ವಿಕ್ಟೋರಿಯಾ ಆಝಾರೆಂಕಾ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿದ್ದಾರೆ.