ಫ್ರೆಂಚ್ ಓಪನ್ 2021 – ವಿಕ್ಟೋರಿಯಾಗೆ ಶಾಕ್.. ಕ್ವಾರ್ಟರ್ ಫೈನಲ್‍ಗೆ ಪಾಲೌ ಬಡೊಸಾ, ಅನಾಸ್ಟೆಸಿಯಾ..!

1 min read
Anastasia Pavlyuchenkova saakshatv french open

ಫ್ರೆಂಚ್ ಓಪನ್ 2021 – ವಿಕ್ಟೋರಿಯಾಗೆ ಶಾಕ್.. ಕ್ವಾರ್ಟರ್ ಫೈನಲ್‍ಗೆ ಪಾಲೌ ಬಡೊಸಾ, ಅನಾಸ್ಟೆಸಿಯಾ..!

Paula Badosa  french open saakshatvಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಯುವ ಆಟಗಾರ್ತಿಯೇ ಕಾರುಬಾರು ನಡೆಸುತ್ತಿದ್ದಾರೆ. ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಸೆರೆನಾ ವಿಲಿಯಮ್ಸ್, ವಿಕ್ಟೋರಿಯಾ ಆಝಾರೆಂಕಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಈ ನಡುವೆ, ಫ್ರೆಂಚ್ ಓಪನ್ ಟೂರ್ನಿಯ ಮಾಜಿ ರನ್ನರ್ ಅಪ್ ಮಾರ್ಕೆಟಾ ವೊಂಡ್ರೋಸೊವಾ ಕೂಡ ಫ್ರಿ ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್ ನ ಪಾಲೌ ಬಡೊಸಾ ಅವರು 6-4, 3-6, 6-2ರಿಂದ ಮಾರ್ಕೆಟಾ ವೊಂಡ್ರೋಸೊವಾ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ಲೋವೆನಿಯಾದ ತಮಾರ ಝಿಡಾನ್ಸೆಕ್ 7-6, 6-1ರಿಂದ Tamara Zidansek french open saakshatvರೋಮಾನಿಯಾದ ಸೊರಾನಾ ಕ್ರಿಸ್ಟಾ ಅವರನ್ನು ಮಣಿಸಿದ್ರು. ಈ ಮೂಲಕ ತಮಾರ ಝಿಡಾನ್ಸೆಕ್ ಅವರು ಸ್ಲೋವೆನಿಯಾ ಪರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಮತ್ತೊಂದು ಸಿಂಗಲ್ಸ್ ಪಂಂದ್ಯದಲ್ಲಿ ರಷ್ಯಾದ ಅನಾಸ್ಟೆಸಿಯಾ ಪಾವ್ಲಾಚುಂಕೊವಾ 5-7, 6-3, 6-2ರಿಂದ ಮಾಜಿ ನಂಬರ್ ವನ್ ಆಟಗಾರ್ತಿ ವಿಕ್ಟೋರಿಯಾ ಆಝಾರೆಂಕಾ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd