ಬೆಂಗಳೂರಲ್ಲಿ ತಗ್ಗಿದ ಕೊರೊನಾ : ಇಂದು 2018 ಜನರಲ್ಲಿ ಕೋವಿಡ್ ದೃಢ bengaluru
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ತಗ್ಗಿದ್ದು, ನಗರದಲ್ಲಿಂದು ಕೇವಲ 2018 ಜನರಲ್ಲಿ ಕೋವಿಡ್ ದೃಢಪಟ್ಟಿದೆ.
ನಗರದ ಬೊಮ್ಮನಹಳ್ಳಿಯಲ್ಲಿ 216, ದಾಸರಹಳ್ಳಿ 54, ಬೆಂಗಳೂರು ಪೂರ್ವ 242, ಮಹಾದೇವಪುರ 368, ಆರ್ಆರ್ ನಗರ 144,
ಬೆಂಗಳೂರು ದಕ್ಷಿಣ 168, ಬೆಂಗಳೂರು ಪಶ್ಚಿಮ 174, ಯಲಹಂಕದಲ್ಲಿ 153 ಜನರಿಗೆ ಕೊರೊನಾ ವಕ್ಕರಿಸಿದೆ.
ನಿನ್ನೆ ನಗರದಲ್ಲಿ 2944 ಪ್ರಕರಣಗಳು ಪತ್ತೆಯಾಗಿದ್ದವು. 187 ಮಂದಿ ಮೃತಪಟ್ಟಿದ್ದರು.
ಪಾಸಿಟಿವಿಟಿ ಪ್ರಮಾಣ 9.92%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 7.14% ಇದೆ.









