ರಾಜ್ಯದಲ್ಲಿ ಜಿಎಸ್‍ಟಿ ಜತೆಗೆ ವಿಎಸ್‍ಟಿ (ವಿಜಯೇಂದ್ರ) ತೆರಿಗೆ ಕಟ್ಟಬೇಕಾಗಿದೆ : ಕೃಷ್ಣಬೈರೇಗೌಡ ವಾಗ್ದಾಳಿ
ಕೋಲಾರ : ರಾಜ್ಯದಲ್ಲಿ ಕೊರೊನಾ ಸಂದರ್ಭದಲ್ಲೂ ಸರ್ಕಾರ ಲೂಟಿ ಮಾಡ್ತಿದೆ. 20 % ಸರ್ಕಾರ ರಾಜ್ಯದಲ್ಲಿ ಜಾರಿಯಲ್ಲಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸಂದರ್ಭದಲ್ಲೂ ಸರ್ಕಾರ ಲೂಟಿ ಮಾಡ್ತಿದೆ, 20 % ಸರ್ಕಾರ ರಾಜ್ಯದಲ್ಲಿ ಜಾರಿಯಲ್ಲಿದೆ.
ರಾಜ್ಯದಲ್ಲಿ ಜಿ.ಎಸ್.ಟಿ ಜೊತೆಗೆ ವಿ.ಎಸ್. ಟಿ ತೆರಿಗೆ ಕಟ್ಟಬೇಕಾಗಿದೆ. ಜನ್ರು ಸರ್ಕಾರದ ಸೆಸ್ ಜೊತೆಗೆ ವಿಎಸ್ ಟಿ (ವಿಜೇಯೇಂದ್ರ ತೆರಿಗೆ) ಕಟ್ಟಬೇಕು.
ಮಾಸ್ಕ್ ವೆಂಟಿಲೇಟರ್, ಆಕ್ಸಿಜನ ದಂಧೆಯಲ್ಲಿ ಲೂಟಿ ಹೊಡೆಯುತ್ತಿದೆ. ಇಂತಹ ನೀಚ ಗೆಟ್ಟ ಸರ್ಕಾರ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೊರೊನಾ ಸಂಕಷ್ಟದಲ್ಲೂ ಅಧಿಕಾರಕ್ಕಾಗಿ ಕಚ್ಚಾಟ, ಕುರ್ಚಿಯಲ್ಲಿ ಮುಳುಗಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ್ರನ್ನು ನಡು ನೀರಿನಲ್ಲಿ ಕೈ ಬಿಟ್ಟದೆ.
ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವುದರಲ್ಲಿ ರಾಜ್ಯ ಎರಡನೇಯದು. ಕೇಂದ್ರ ಸರ್ಕಾರ ನಮ್ಮ ತೆರಿಗೆಯಲ್ಲಿ ಬೇರೆ ರಾಜ್ಯಗಳಿಗೆ ಆಕ್ಸಿಜನ್ ಕೊಟ್ಟಿದೆ.
ಬಿಜೆಪಿ ಮತ ಹಾಕಿದ ತಪ್ಪಿಗೆ ನಮಗೆ ಆಕ್ಸಿಜನ ಇಲ್ಲ, ಎಂಪಿಗಳು ಇದುವೆರಗೂ ಆಕ್ಸಿಜನ್ ಬೇಕು ಅಂತಾ ಕೇಳಿಲ್ಲ, ನಮ್ಮನ್ನು ಕಾಪಾಡಬೇಕಾಗದ ಸರ್ಕಾರ ಕನ್ನಡಿಗರಿಗೆ ದ್ರೋಹ ಮಾಡಿದೆ ಎಂದು ಬೆಂಕಿಕಾರಿದರು.