‘KGF ಚಾಪ್ಟರ್ 2’ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಶಾಂತ್ ನೀಲ್
ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಎದುರು ನೋಡ್ತಿರುವ KGF ಚಾಪ್ಟರ್ 2 ಸಿನಿಮಾ ಕೊರೊನಾ ಕಾಣದಿಂದಾಗಿ ರಿಲೀಸ್ ಗೆ ತಡವಾಗಿದೆ.. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಿನಿಮಾ ಜುಲೈ 16ಕ್ಕೆ ರಿಲೀಸ್ ಆಗಬೇಕಿತ್ತು.. ಆದ್ರೆ ಕೊರೊನಾ 2ನೇ ಅಲೆ ಇಂದಾಗಿ ಸಿನಿಮಾಮಂದಿರಗಳು ಓಪನ್ ಆಗುವುದು ಕಷ್ಟಸಾಧ್ಯ.. ಒಂದು ವೇಳೆ ಚಿತ್ರಮಂದಿರಗಳು ಪುನರಾಂಭವಾದ್ರೂ ಕೂಡ 100 % ಸೀಟಿಂಗ್ ಗೆ ಇಷ್ಟು ಬೇಗ ಅನುಮತಿ ನೀಡುವುದು ಕೂಡ ಅನುಮಾನವೇ..
ಈ ನಡುವೆ ಸಿನಿಮಾ ಪ್ರಿರು , ಅದ್ರಲ್ಲೂ ಕೆಜಿಎಫ್ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಸದ್ಯ ಈ ಬಗ್ಗೆ ನಿರ್ದೇಶಕ ಪ್ರಸಾಂತ್ ನೀಲ್ ಅವರು ಮಾತನಾಡಿದ್ದಾರೆ.. ಇಂಥಹಾ ಸಮಯ ಬರುತ್ತದೆಂದು ನಾವು ನಿರೀಕ್ಷಿಸಿರಲಿಲ್ಲ. ಆದರೆ ಏನೂ ಮಾಡಲಾಗದು ನಾವು ಇದನ್ನು ಅನುಭವಿಸಲೇ ಬೇಕು. ನಾನು ಈಗ ಕೆಜಿಎಫ್ ಕತೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಪೋಸ್ಟ್ ಪ್ರೊಡಕ್ಷನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಮಯದೊರಯಿತು ಎಂದಿದ್ದಾರೆ.
ಅಲ್ಲದೇ ಸಿನಿಮಾ ಬಿಡುಗಡೆ ನಮ್ಮದು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಡೆವ ಕತೆಯುಳ್ಳ ಸಿನಿಮಾ. ಮೇಕಿಂಗ್ ಸಹ ಬಹಳ ಭಿನ್ನವಾಗಿ ಮಾಡಿದ್ದೇವೆ. ಹಾಗಾಗಿ ಆ ಸಿನಿಮಾವನ್ನು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಿದರೂ ಸಿನಿಮಾದ ಮೇಲೆ ಯಾವ ಅಂಶಗಳು ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ ಪ್ರಶಾಂತ್.
ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಶಾಂತ್ ನೀಲ್ – ಇಂಜೆಕ್ಷನ್ಗೆ ಹೆದರಿಕೊಂಡ್ರಾ..?
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








