ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಶಾಂತ್ ನೀಲ್ – ಇಂಜೆಕ್ಷನ್ ಗೆ ಹೆದರಿಕೊಂಡ್ರಾ..?
ಬೆಂಗಳೂರು : ಕೊರೊನಾ 2ನೇ ಅಲೆ ಹಾವಳಿ ನಡುವೆ ಲಸಿಕೆ ಅಭಿಯಾನವೂ ಭರದಿಂದ ಸಾಗ್ತಿದೆ.. ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ ಎಲ್ಲಾ ಸಿನಿಮಾರಂಗದ ಸ್ಟಾರ್ ಗಳು ಸಹ ಕೋವಿಡ್ ಲಸಿಕೆ ಹಾಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಹಂಚಿಕೊಳ್ಳುತ್ತಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ..
ಈ ನಡುವೆ KGF ನ ಸಾರಥಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೂಡ ವ್ಯಾಕ್ಸಿನ್ ಪಡೆದಿದ್ದು ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಆದ್ರೆ ಈ ಫೋಟೋಗೆ ನೆಟ್ಟಿಗರು ತಾರೆಯರು ಫನ್ನಿಯಾಗಿ ಕಮೆಂಟ್ ಗಳನ್ನ ಮಾಡ್ತಿದ್ದಾರೆ.
ಹೌದು ಆದರೆ ಈ ಇಂಜೆಕ್ಷನ್ ತೆಗೆದುಕೊಳ್ಳಲು ನಿರ್ದೇಶಕರು ಹೆದರಿಕೊಂಡ್ರಾ ಎಂಬ ಪ್ರಶ್ನೆಯೊಂದು ಮೂಡಿದೆ. ಕೈಗೆ ನರ್ಸ್ ಇಂಜೆಕ್ಷನ್ ನೀಡುವಾಗ ಪ್ರಶಾಂತ್ ನೀಲ್ ಅವರು ಬಲಗಡೆಗೆ ತಿರುಗಿ ತಮ್ಮ ಒಂದು ಕೈಯನ್ನು ಕಣ್ಣಿಗೆ ಇಟ್ಟಿದ್ದಾರೆ. ಇದು ಅವರು ಇಂಜೆಕ್ಷನ್ ತೆಗೆದುಕೊಳ್ಳಲು ಭಯಪಟ್ಟುಕೊಂಡಂತೆ ಕಾಣಿಸುತ್ತಿದೆ.
ಪ್ರಶಾಂತ್ ನೀಲ್ ಅವರು ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆ ಸುರಿಸಿದ್ದಾರೆ. ಇಂಜೆಕ್ಷನ್ ಕೈಗೆ ಕೊಟ್ಟಿರೋದು. ನೀವ್ಯಾಕೆ ಕಣ್ಣು ಮುಚ್ಚಿದ್ದಿರಾ, ನರ್ಸ್ ಕಂಡ್ರೆ ನಾಚಿಕೆ ಇರಬೇಕು ಎಂದೆಲ್ಲಾ ಫನ್ನಿ ಫನ್ನಿ ಕಮೆಂಟ್ ಗಳನ್ನ ಮಾಡಿ ಪ್ರಶಾಂತ್ ನೀಲ್ ಅವರ ಕಾಲೆಳೆದಿದ್ದಾರೆ.
ಇನ್ನೂ ಕೆಜಿಎಫ್ ನಟಿ ರವೀನಾ ಟಂಡನ್ ಕೂಡ ಕಾಮೆಂಟ್ ಮಾಡಿ, ಪ್ರಶಾಂತ್ ಸರ್ ಇದು ತುಂಬಾ ಕ್ಯೂಟ್ ಆಗಿದೆ. ನಾನು ಲಸಿಕೆ ಪಡೆದಕೊಂಡ ವೀಡಿಯೋವನ್ನು ದಯವಿಟ್ಟು ನೋಡಿ. ಅಗ ನಿಮಗೆ ಧೈರ್ಯ ಬರುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ನೀಲ್, ಮೇಡಂ ಬಹುಶಃ ನಾವು ವೀಡಿಯೋ ನೋಡಲೇ ಬೇಕು. ನೀವು ಲಸಿಕೆ ಪಡೆದ ವೀಡಿಯೋ ನಮ್ಮನ್ನು ಪ್ರೇರೇಪಿಸಬಹುದು ಎಂದು ಬರೆದುಕೊಂಡು ಸ್ಮೈಲಿಂಗ್ ಎಮೋಜಿ ಹಾಕಿದ್ದಾರೆ.
ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿ, ನಾನು ಕೊರೊನಾ ಲಸಿಕೆ ಪಡೆದುಕೊಂಡಿದ್ದೇನೆ. ಯಾರೆಲ್ಲ ಲಸಿಕೆ ಪಡೆದುಕೊಂಡಿಲ್ಲವೋ ಅವರೆಲ್ಲರೂ ಈ ಕೂಡಲೇ ತಮ್ಮ ಕುಟುಂಬ ಸಮೇತರಾಗಿ ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ.