ಐನೂರು ಒಳಪಟ್ಟು ಪಾಸಿಟಿವ್ ಬಂದರೆ ಅಷ್ಟೇ ಅನ್ಲಾಕ್ : ಆರ್.ಅಶೋಕ್
ಬೆಂಗಳೂರು : ಜೂನ್ 14ಕ್ಕೆ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಮುಗಿಯಲಿದ್ದು, ಏಕಾಏಕಿ ಅನ್ ಲಾಕ್ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಅನ್ ಲಾಕ್ ಪ್ರತಿಕ್ರಿಯೆ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಜೂನ್ 14ರಂದು ಲಾಕ್ಡೌನ್ ಕೊನೆಯ ದಿನವಾಗಿದೆ. ನಂತರ ಏಕಾಏಕಿ ಅನ್ ಲಾಕ್ ಮಾಡುವುದಿಲ್ಲ.
ಹಂತ ಹಂತವಾಗಿ ತೆರೆಯಲಾಗುವುದು. ಸದ್ಯ ನಗರದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ.
ಪಾಸಿಟಿವ್ ಸಂಖ್ಯೆ ಕೂಡ 500ಕ್ಕಿಂತ ಇಳಿಕೆಯಾಗಬೇಕು. ಹೀಗಾಗಿ, ಲಾಕ್ಡೌನ್ ನ ಒಂದೇ ದಿನಕ್ಕೆ ತೆರೆಯುವುದಿಲ್ಲ. ನಾಲ್ಕೈದು ಹಂತಗಳಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.
ಇನ್ನು ಸದ್ಯ ಅಗತ್ಯ ವಸ್ತುಗಳ ಖರೀದಿಗೆ 6 ರಿಂದ 10ರ ಬದಲು, 6 ರಿಂದ 12 ಗಂಟೆವರೆಗೆ ಅವಕಾಶ ಕೊಡಲಾಗುವುದು.
ಪಾರ್ಕ್ ಗಳಲ್ಲಿ ವಾಕಿಂಗ್ ಗೆ ಅವಕಾಶ ಕೊಡುವ ಬಗ್ಗೆ ಚರ್ಚೆ ನಡೆದಿದೆ.
ನಗರದಲ್ಲಿ ಐನೂರು ಒಳಪಟ್ಟು ಪಾಸಿಟಿವ್ ಬಂದರೆ ಅಷ್ಟೇ ಅನ್ಲಾಕ್ ಸಾಧ್ಯವಾಗುತ್ತದೆ. ಜೂನ್ 11 ಅಥವಾ 12ರಂದು ತಜ್ಞರ ಜೊತೆ ಸಭೆ ನಡೆಸಿ ಸಿಎಂ ತೀರ್ಮಾನ ಮಾಡಬಹುದು ಎಂದರು.









