ಹೊಟ್ಟೆಪಾಡಿಗಾಗಿ ಜನರನ್ನ ರಂಜಿಸುತ್ತಿರುವ ಈ ವೃದ್ಧನ ಪ್ರತಿಭೆಗೆ ನೆಟ್ಟಿಗರು ಫದಾ..! VIRAL
ದೇಶಾದ್ಯಂತ ಕೊರೊನಾ ಹಾವಳಿಯ ನಡುವೆ ಲಾಕ್ ಡೌನ್ ಹೇರಲಾಗಿದ್ದು, ಅನೇಕ ಬಡವರು ತುತ್ತು ಅನ್ನಕ್ಕು ಕಷ್ಟ ಪಡಬೇಕಾಗಿದೆ.. ಈ ನಡುವೆ ವೃದ್ಧರೊಬ್ಬರು ಹೊಟ್ಟೆಪಾಡಿಗಾಗಿ ಜನರನ್ನ ರಂಜಿಸುತ್ತಾ ವಯೊಲಿನ್ ನಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಸಂಗೀತಗಾರರ ಪ್ರತಿಭೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಹಾಡುಗಳನ್ನು ತಮ್ಮ ವಯೋಲಿನ್‌ನಲ್ಲಿ ನುಡಿಸುತ್ತಿರುವ ಕೋಲ್ಕತ್ತಾ ಹಿರಿಯ ವ್ಯಕ್ತಿಯೊಬ್ಬರ ಪ್ರತಿಭೆಯ ವಿಡಿಯೋ ವೈರಲ್ ಆಗಿದೆ. ಅಂದ್ಹಾಗೆ ಆರಿಫ್ ಶಾ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ರೀತಿ ವಯೊಲಿನ್ ನಡುಸುತ್ತಿರುವವರ ಹೆಸರು ಬೋಗೋಬಾನ್ ಮಾಲಿ.. ಲಾಕ್‌ಡೌನ್ ಇರುವ ನಡುವೆ ಸಾರ್ವಜನಿಕರನ್ನು ರಂಜಿಸಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದಾರೆ.
Watch this old man's talent from Kolkata pic.twitter.com/bewfNFzQF0
— Aarif Shah (@shahaarrif) June 5, 2021
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.