ಲಾಕ್ ಡೌನ್ ನಡುವೆಯೂ ನಿಖಿಲ್ ಮದುವೆ ನೆರವೇರಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಿಖಿಲ್ ವಿವಾಹದಲ್ಲಿ ಲಾಕ್ ಡೌನ್ ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ವು. ಇದಕ್ಕೆ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ‘ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು ಎಂದಿದ್ದರು.
ಆದ್ರೆ, ಏಪ್ರಿಲ್ 17ರಂದು ನಡೆದ ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹದ ದಿನ ನೂತನ ದಂಪತಿಯೊಂದಿಗೆ ಅವರ ಕುಟುಂಬ ತೆಗೆಸಿಕೊಂಡ ಫೋಟೋವೊಂದು ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ಆ ಫೋಟೋದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರು ಹಾಗೂ ಅವರ ಧರ್ಮ ಪತ್ನಿ ಚನ್ನಮ್ಮ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಅವರ ಸೋದರ ಸಂಬಂಧಿಗಳು, ರೇವತಿ ಕುಟುಂಬದವರು ಎಲ್ಲ ಸೇರಿ ಬರೋಬ್ಬರಿ 35 ಜನರು ಇದ್ದಾರೆ.
ಹೀಗಾಗಿ ಆ ಫೋಟೋ ನೋಡಿದ ಜನರಲ್ಲಿ ಸಾಮಾಜಿಕ ಅಂತರ ಎಲ್ಲಿದೆ ಬ್ರದರ್ ಅನ್ನೋ ಪ್ರಶ್ನೆ ಮೂಡುತ್ತಿರೋದಂತು ಸುಳ್ಳಲ್ಲ.








