ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಂಚಾರದ ಹಾದಿಯಲ್ಲಿ ದುರ್ವಿದಿಯ ಆಟಕ್ಕೆ ಬಲಿಯಾದ ನಟ ಸಂಚಾರಿ ವಿಜಯ್

Shwetha by Shwetha
June 15, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Kannada actor Sanchari Vijay
Share on FacebookShare on TwitterShare on WhatsappShare on Telegram

ಸಂಚಾರದ ಹಾದಿಯಲ್ಲಿ ದುರ್ವಿದಿಯ ಆಟಕ್ಕೆ ಬಲಿಯಾದ ನಟ ಸಂಚಾರಿ ವಿಜಯ್

ಹೆಜ್ಜೆ ಹೆಜ್ಜೆಗೂ ದುರ್ಗಮ ಹಾದಿಯಲ್ಲಿ ಸಂಚರಿಸುತ್ತ ತಮ್ಮ ಸಹಜ ನಟನೆಯಿಂದ ಕೀರ್ತಿಯ ಉತ್ತುಂಗಕ್ಕೇರಿದ ನಟ ಸಂಚಾರಿ ವಿಜಯ್. ಇವರ ಮೂಲ ಹೆಸರು ವಿಜಯ್ ‌ಕುಮಾರ್ ಬಿ. ತಂದೆ ಬಸವರಾಜಯ್ಯ ತಾಯಿ ಗೌರಮ್ಮ. ಜುಲೈ 17 , 1983ರಂದು ಜನಿಸಿದ ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು.
ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಅನಿರೀಕ್ಷಿತವಾಗಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದ ಸಂಚಾರಿ. ಬಹುಶಃ ಆಗ ತಾನೊಬ್ಬ ನಾಟಕ ರಂಗದಲ್ಲಿ ಮಿಂಚುವ ಮಾಣಿಕ್ಯವಾಗುತ್ತೇನೆ ಎಂದು ಅನಿಸಿರಲಿಲ್ಲವೆನೋ…
Kannada actor Sanchari Vijay
ಸಂಚಾರಿ ವಿಜಯ್ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಒಬ್ಬ ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ನಿಂತವರು.
ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ‌ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಾಲ್ಯದಿಂದಲೇ ರಂಗಭೂಮಿಯ ಕುರಿತಾಗಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ವಿಜಯ್ ‌ ನಂತರ ಉಪನ್ಯಾಸ ವೃತ್ತಿಗೆ ಗುಡ್ ಬೈ ಹೇಳಿ ರಂಗಭೂಮಿಯಲ್ಲಿ ತಮ್ಮನ್ನು ‌ತೊಡಗಿಸಿಕೊಳ್ಳುತ್ತಾರೆ.
ಸಂಚಾರಿ ಥಿಯೇಟರ್ ಜೊತೆ 10 ವರ್ಷಗಳ ನಂಟನ್ನು ಹೊಂದಿದ್ದ  ವಿಜಯ್ ರಂಗಭೂಮಿಯಲ್ಲಿ ‌ತಮ್ಮದೇ ಆದ ಛಾಪುನ್ನು ಮೂಡಿಸಲು ಸಫಲರಾಗುತ್ತಾರೆ. ಒಂದೆಡೆ ರಂಗಭೂಮಿಯಲ್ಲಿ ಹೆಸರು ಮಾಡುತ್ತಾ ​​ ಇನ್ನೊಂದೆಡೆ ಸಿನಿಮಾಗಳಲ್ಲೂ ನಟಿಸಲು ಪ್ರಾರಂಭಿಸುತ್ತಾರೆ.
ಅದೇ ಸಮಯದಲ್ಲಿ ಕೈಲಾಸಂ ಅವರು ಬರೆದಿದ್ದ ಕೈಲಾಸಂ ಕೀಚಕ ನಾಟಕದಲ್ಲಿ ಸಣ್ಣ ಪಾತ್ರ ಬೃಹನ್ನಳೆಯಾಗಿ ನಟಿಸಲು ಒಪ್ಪಿಕೊಳ್ಳುತ್ತಾರೆ. ಈ ಪಾತ್ರದಲ್ಲಿನ ಅವರ ಅಭಿನಯ ಜನರ ಮನಸ್ಸನ್ನು ಅದೆಷ್ಟರ ಮಟ್ಟಿಗೆ ಸೂರೆಗೊಂಡಿತು ಎಂದರೆ ಅದು ವಿಜಯ್ ಅಲ್ಲ ಬೃಹನ್ನಳೆ ಎಂದು ಭಾವಿಸುವಂತೆ ಅವರ ನಟನೆ ಇತ್ತು.
Kannada actor Sanchari Vijay
ಆ ಸಮಯದಲ್ಲಿ ‌ ಪುರುಷನೋರ್ವ ಲಿಂಗ ಬದಲಾವಣೆ ಮಾಡಿಸಿಕೊಂಡು ಮಹಿಳೆಯಾಗಿ ಬದಲಾಗಿ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳ ಸೂಕ್ಷ್ಮ ಅಂಶಗಳ ‘ನಾನು ಅವನಲ್ಲ ಅವಳು’ ಸಿನಿಮಾದ ಪ್ರಮುಖ ಪಾತ್ರಧಾರಿಯ ಹುಡುಕಾಟದಲ್ಲಿ ತೊಡಗಿದ್ದ ಬಿ.ಎಸ್​ ಲಿಂಗದೇವರು ಅವರಿಗೆ ಸಂಚಾರಿ ವಿಜಯ್​ ಅಭಿನಯಿಸಿದ ಬೃಹನ್ನಳೆ ಪಾತ್ರದ ಬಗ್ಗೆ ತಿಳಿಯುತ್ತದೆ.

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

2015ರಲ್ಲಿ ತೆರೆಕಂಡ ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ತೃತೀಯ ಲಿಂಗಿ ಪಾತ್ರ ವಿಜಯ್ ಅವರ ಸಿನಿಮಾ ಬದುಕಿಗೆ ದೊಡ್ಡ ಬ್ರೇಕ್ ಕೊಡುತ್ತದೆ. ಈ ಪಾತ್ರದಲ್ಲಿನ ಅವರ ನಟನೆಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್​ನಂಥ ಪ್ರಶಸ್ತಿಗಳು ಒಲಿದುಬರುತ್ತವೆ. ಕನ್ನಡ ಸಿನಿಮಾ ಇತಿಹಾಸದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮೂರನೇ ನಟ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ.
Kannada actor Sanchari Vijay
ಕನ್ನಡ ಸಿನಿಮಾ ಇತಿಹಾಸದಲ್ಲಿ ಈ ಮೊದಲು 1975 ರಲ್ಲಿ ಚೋಮನದುಡಿಯಲ್ಲಿ ಚೋಮ ಪಾತ್ರದ ಅಭಿನಯಕ್ಕಾಗಿ ಮೂಡಬಿದಿರೆ ವೆಂಕಟರಾವ್ ವಾಸುದೇವರಾವ್ ಪ್ರಥಮ ರಾಷ್ಟ್ರಪ್ರಶಸ್ತಿ ಪಡೆದಿದ್ದರೆ, ಎರಡನೇ ರಾಷ್ಟ್ರಪ್ರಶಸ್ತಿ 1986ರಲ್ಲಿ ತಬರನ ಕಥೆ ಸಿನಿಮಾದಲ್ಲಿನ ಪ್ರಮುಖ ಪಾತ್ರ ಅಭಿನಯಕ್ಕಾಗಿ ಚಾರುಹಾಸನ್ ಅವರಿಗೆ ಸಂದಿದೆ.

ಮನೋಜ್ಞ ಅಭಿನಯದ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ನಟನಾಗಿದ್ದ ವಿಜಯ್ ತಮ್ಮನ್ನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಕೊಡಗು ಭೀಕರ ಪ್ರವಾಹಕ್ಕೆ ‌ಈಡಾದಾಗ ತಾವೇ ಸ್ವತಃ ಫಿಲ್ಡ್​​ಗಿಳಿದು ಕೆಲಸ ಮಾಡಿದ್ದರು. ಕಳೆದೆರೆಡು ವರ್ಷಗಳಿಂದ ಜನರ ಬದುಕನ್ನು ಹೈರಾಣಾಗಿಸಿರುವ ಕೊರೋನಾ ಸೋಂಕಿನಿಂದ ಸಂಕಷ್ಟಕೊಳಗಾದವರ ನೆರವಿಗೆ ನಿಂತಿದ್ದರು. ಉಸಿರು ಎಂಬ ಸಂಘ ಕಟ್ಟಿ ಕೊರೋನಾ ಸೋಂಕಿತರಿಗೆ ಅಮ್ಲಜನಕ ಸಾಂದ್ರಕವನ್ನು ಪೂರೈಸುತ್ತಿದ್ದರು.
Kannada actor Sanchari Vijay
ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟ ಸಂಚಾರಿ ವಿಜಯ್ ಜೂನ್ 12 ರ ರಾತ್ರಿಯಂದು ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಲಾ ಜೀವನಕ್ಕೆ ಶಾಶ್ವತವಾದ ತೆರೆ ಎಳೆದು ಸಂಚಾರವನ್ನು ಮುಗಿಸಿದ್ದಾರೆ.
ಜೀವಿತಾವಧಿಯಲ್ಲಿ ಇತರರಿಗೆ ಸಹಾಯ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್ ಅಂಗಾಂಗಗಳನ್ನು ದಾನ‌ಮಾಡಿ ಹಲವಾರು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಜೊತೆಗೆ ಪ್ರತಿಯೊಬ್ಬ ಬೈಕ್ ಸವಾರರಿಗೆ, ಹಿಂಬದಿ ಸವಾರರಿಗೆ ಸಂಚಾರ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಭೌತಿಕವಾಗಿ ನಮ್ಮಿಂದ ದೂರವಾದರೂ ಅಂಗದಾನ ಮಾಡಿ ಸದಾ ನಮ್ಮೊಡನೆ ಸಂಚರಿಸುವ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.

#Kannadaactor #SanchariVijay

Tags: Kannada actor Sanchari Vijay
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram