corona ಬೆಂಗಳೂರಲ್ಲಿಂದು 1,333 ಜನರಲ್ಲಿ ಕೋವಿಡ್ ಪಾಸಿಟಿವ್
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಸಾವಿರದ ಗಡಿದಾಟಿದೆ.
ನಗರದಲ್ಲಿಂದು 1,333 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಗರದ ಬೊಮ್ಮನಹಳ್ಳಿಯಲ್ಲಿ 139, ದಾಸರಹಳ್ಳಿ 49, ಬೆಂಗಳೂರು ಪೂರ್ವ 130, ಮಹಾದೇವಪುರ 210, ಆರ್‍ಆರ್ ನಗರ 103,
ಬೆಂಗಳೂರು ದಕ್ಷಿಣ 130, ಬೆಂಗಳೂರು ಪಶ್ಚಿಮ 99, ಯಲಹಂಕದಲ್ಲಿ 108 ಜನರಿಗೆ ಸೋಂಕು ತಗುಲಿದೆ.
ಪಾಸಿಟಿವಿಟಿ ಪ್ರಮಾಣ 2.79% ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 1.89% ಇದೆ.
ನಿನ್ನೆ ನಗರದಲ್ಲಿ 985 ಪ್ರಕರಣಗಳು ಪತ್ತೆಯಾಗಿದ್ದು, 16 ಮಂದಿ ಮೃತಪಟ್ಟಿದ್ದರು.










