ಹೆಸರು ಕಾಳಿನ ಲಡ್ಡು
ಬೇಕಾಗುವ ಸಾಮಾನುಗಳು
ಹೆಸರು ಕಾಳು – 1 ಕಪ್
ಬೆಲ್ಲ -1/2 ಕಪ್
ತುಪ್ಪ – 2 ಚಮಚ
ಡ್ರೈ ಫ್ರೂಟ್ಸ್ – ಅಗತ್ಯವಿರುವಷ್ಟು

ಮಾಡುವ ವಿಧಾನ
ಮೊದಲಿಗೆ ಹೆಸರು ಕಾಳನ್ನು ಚೆನ್ನಾಗಿ ಹುರಿಯಿರಿ. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿ. ನಂತರ ಪೌಡರ್ ಅನ್ನು ಸೋಸಿ ತರಿತರಿ ಮತ್ತು ಪೌಡರ್ ಬೇರ್ಪಡಿಸಿ. ಈಗ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಬೆಲ್ಲ ವನ್ನು ಸೇರಿಸಿ, ಕರಗಿಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಇದಕ್ಕೆ ಹೆಸರು ಕಾಳಿನ ಹುಡಿಯನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಈ ಮಿಶ್ರಣದಿಂದ ಉಂಡೆ ಕಟ್ಟಿದರೆ ರುಚಿಯಾದ ಹೆಸರುಕಾಳಿನ ಲಡ್ಡು ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1404981510365749248?s=19
https://twitter.com/SaakshaTv/status/1405018925264478210?s=19
ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಹಾಗಿದ್ದರೆ ಅದನ್ನು ಸುಲಭವಾಗಿ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ#download #pancard https://t.co/dseCciimAf
— Saaksha TV (@SaakshaTv) June 17, 2021
https://twitter.com/SaakshaTv/status/1404960161115086858?s=19
#Saakshatv #cookingrecipe #hesarukaalinaladdu








