ಟೀಮ್ ಇಂಡಿಯಾ ಅಂತಿಮ 11ರ ಬಳಗಕ್ಕೆ ನಿಮ್ಮ ಆಯ್ಕೆಯ ಆಟಗಾರರು…!
ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಹೋರಾಟ ನಡೆಸಲಿವೆ.
ಈಗಾಗಲೇ ಉಭಯ ತಂಡಗಳ 15ರ ಬಳಗವನ್ನು ಪ್ರಕಟಿಸಲಾಗಿದೆ. ಆದ್ರೆ 11ರ ಬಳಗದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲವಂತೂ ಇದ್ದೇ ಇದೆ.
ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನಡೆಯಲಿರುವ ಈ ಪಂದ್ಯ ಟೆಸ್ಟ್ ಕ್ರಿಕೆಟ್ ನ ಐತಿಹಾಸಿಕ ಪಂದ್ಯವಾಗಲಿದೆ. ಟೆಸ್ಟ್ ಚಾಂಪಿಯನ್ ಪಟ್ಟಕ್ಕಾಗಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಗೆಲುವಿನ ನಂತರ ನ್ಯೂಜಿಲೆಂಡ್ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೀಗಾಗಿ ಟೀಮ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ.
ಉಭಯ ತಂಡಗಳು ಕೂಡ ಫೈನಲ್ ಟೆಸ್ಟ್ ಪಂದ್ಯಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿವೆ.
ಅನುಭವಿ ಮತ್ತು ಯುವ ಆಟಗಾರರನ್ನೊಳಗೊಂಡ ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದಾರೆ. ಹೀಗಾಗಿ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ಸ್ಪಷ್ಟ ಫಲಿತಾಂಶ ಹೊರಬರುವುದು ಬಹುತೇಕ ಪಕ್ಕಾ ಆಗಿದೆ.
ಟೀಮ್ ಇಂಡಿಯಾದ 15ರ ಬಳಗ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್, ವೃದ್ದಿಮಾನ್ ಸಾಹ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬೂಮ್ರಾ, ಇಶಾಂತ್ ಶರ್ಮಾ, ಮಹಮ್ಮದ್ ಶಮಿ, ಉಮೇಶ್ ಯಾದವ್, ಮಹಮ್ಮದ್ ಸಿರಾಜ್.
ನ್ಯೂಜಿಲೆಂಡ್ ತಂಡದ 15ರ ಬಳಗ
ಕೇನ್ ವಿಲಿಯಮ್ಸನ್ – (ನಾಯಕ) ಟಾಮ್ ಬ್ಲುಂಡೇಲ್, ಟ್ರೆಂಟ್ ಬೌಲ್ಟ್,
ಡೇವೊನ್ ಕಾನ್ವೋ, ಕಾಲಿನ್ ಡೇ, ಮ್ಯಾಟ್ ಹೆನ್ರಿ, ಕೈಲ್ ಜಾಮಿನ್ಸನ್, ಟಾಮ್ ಲಥಾಮ್, ಹೆನ್ರಿ ನಿಕೊಲಾಸ್, ಆಜಾಝ್ ಪಟೇಲ್, ಟೀಮ್ ಸೌಥಿ,ರೋಸ್ ಟೇಲರ್, ನೇಲ್ ವಾಗ್ನರ್, ವಾಟ್ಲಿಂಗ್,
ವಿಲ್ ಯಂಗ್








