ಅಕ್ಷಯ್ ಕುಮಾರ್ ಗೆ ಓಪನ್ ಚಾಲೆಂಜ್ ಕೊಟ್ಟ ‘WWE’ ಅಂಡರ್ ಟೇಕರ್..!
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಸಕಲ ಕಲಾ ವಲ್ಲಭ.. ಫೈಟ್ , ನಟನೆ , ಅಡಿಗೆ ಮಾಡೋದ್ರಲ್ಲೂ ಅವರ ಟ್ಯಾಲೆಂಟ್ ಅನ್ನ ಈಗಾಗಲೇ ಅನೇಕ ಶೋಗಳಲ್ಲಿ ಜನ ನೋಡಿ ಕೊಂಡಾಡಿದ್ದಾರೆ.. ಇದೀಗ ಈ ಖಿಲಾಡಿಗೆ WWE ಅಂಡರ್ ಟೇಕರ್ ಓಪನ್ ಚಾಲೆಂಜ್ ಕೊಟ್ಟಿದ್ದಾರೆ.. ಹೌದು.. ನಟ ಅಕ್ಷಯ್ ಕುಮಾರ್ ಇತ್ತೀಚಿಗಷ್ಟೆ ‘ಖಿಲಾಡಿಯೋಂಕ ಕಾ ಖಿಲಾಡಿ’ ಚಿತ್ರದ 25 ವರ್ಷದ ಸಂಭ್ರಮವನ್ನು ಆಚರಿಸಿದ್ದರು.
25ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ WWE ಅಂಡರ್ ಟೇಕರ್ ಮತ್ತು ಅಕ್ಷಯ್ ಕುಮಾರ ಫೈಟ್ ಬಗ್ಗೆ ಮೀಮ್ ಗಳು ವೈರಲ್ ಆಗಿದ್ದವು. WWE ಅಂಡರ್ ಟೇಕರ್ ರನ್ನು ಸೋಲಿಸಿದ ಕೆಲವೇ ಕೆಲವು ಮಂದಿಯಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು ಎನ್ನುವ ಮೀಮ್ ಎಲ್ಲರ ಗಮನ ಸೆಳೆದಿತ್ತು. ಈ ಮೀಮ್ ಅನ್ನು ಶೇರ್ ಮಾಡಿ ಅಕ್ಷಯ್ ಕುಮಾರ್, ‘ನಿಜಕ್ಕೂ ನಾನು ಅಂಟರ್ ಟೇಕರ್ ಜೊತೆ ಸೆಣೆಸಿಲ್ಲ. ವ್ರೆಸ್ಲರ್ ಬ್ರಿಯಾನ್ ಲೀ ಅವರು ಅಂಡರ್ ಟೇಕರ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು’ ಎಂದು ಹೇಳಿದ್ದರು. ಈ ಪೋಸ್ಟ್ WWE ಅಂಡರ್ ಟೇಕರ್ ಗಮನ ಸೆಳೆದಿದೆ.
ಅಕ್ಷಯ್ ಕುಮಾರ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಅಂಡರ್ ಟೇಕರ್, ‘ಹಾ! ನೀವು ರಿಯಲ್ ಪಂದ್ಯಕ್ಕೆ ಸಿದ್ಧರಾದಾಗ ಹೇಳಿ’ ಎಂದು ಕಾಮೆಂಟ್ ಮಾಡಿದ್ದಾರೆ. ಅಂಡರ್ ಟೇಕರ್ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಅಕ್ಕಿ, ‘ಮೊದಲು ನನ್ನ ವಿಮೆಯನ್ನು ಪರಿಶೀಲಿಸುತ್ತೇನೆ ಬಳಿಕ ಹಿಂತಿರುಗೋಣ, ಬ್ರೋ’ ಎಂದು ಉತ್ತರ ನೀಡಿದ್ದಾರೆ. ಈ ಕಮೆಂಟ್ ಇದೀಗ ಭಾರೀ ವೈರಲ್ ಆಗಿದೆ.
ಅಲ್ಲದೇ ಈ ಮಾತುಕತೆಯ ಸ್ಕ್ರೀನ್ ಶಾಟ್ ತೆಗೆದು WWE ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿ, ‘ರಿಯಲ್ ಅಂಡರ್ ಟೇಕರ್ ಮತ್ತು ಅಕ್ಷಯ್ ಕುಮಾರ್ ನಡುವೆ ರಿಯಲ್ ಪಂದ್ಯ ನಡೀಲಿ’ ಎಂದು ಬರೆದುಕೊಂಡಿದ್ದಾರೆ. ಅಂದ್ಹಾಗೆ WWE ನ ಸ್ಟಾರ್ ಅಂಡರ್ ಟೇಕರ್ 2020ರಲ್ಲಿ ವೃತ್ತಪರ ಕುಸ್ತಿಯಿಂದ ನಿವೃತ್ತಿ ಹೊಂದಿದ್ದಾರೆ.
ಅಕ್ಷಯ್ ಕುಮಾರ್ ಅವರ ಸಿನಿಮಾ ವಿಚಾರಕ್ಕೆ ಬರೋದಾದ್ರೆ , ಸದ್ಯ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರ ಬಿಡುಗಡೆಯಾಗಬೇಕಿದೆ.. ಬೆಲ್ ಬಾಟಂ ಸಿನಿಮಾದ ರೀಮೇಕ್ ನಲ್ಲಿ ಅಕ್ಷಯ್ ನಟಿಸಿದ್ದು, ಜುಲೈ 27ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಇನ್ನೂ ಅತರಂಗಿರೇ, ಬಚ್ಚನ್ ಪಾಂಡೆ, ರಾಮ್ ಸೇತು ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬಾಲಿವುಡ್ ನ ಕಿಲಾಡಿ ಅಕ್ಷಯ್ ಬ್ಯುಸಿಯಾಗಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








