ನಿರಂತರ ಕರೆಂಟ್ ಸಮಸ್ಯೆ : ವಿದ್ಯುತ್ ಕಂಬ ಏರಿದ ಸಚಿವ – ಫೋಟೋ ವೈರಲ್..!
ಮಧ್ಯಪ್ರದೇಶ : ಮಧ್ಯಪ್ರದೇಶದ ಗ್ವಾಲಿಯಾರ್ ನಲ್ಲಿ ಪದೇ ಪದೇ ವಿದ್ಯುತ್ ಕೈಕೊಡುತ್ತಿದ್ದ ಪರಿಣಾಮ , ಸಾರ್ವನಿಕರಿಂದ ಅನೇಕ ದೂರುಗಳು ಬಂದ ನಂತರ ಖುದ್ದು ಸಚಿವರೇ ವಿದ್ಯುತ್ ಕಂಬ ಏರಿ ಪರಿಶೀಲನೆ ನಡೆಸಿದ್ದು, ಅವರ ಫೋಟೋ ಇದೀಗ ಸೊಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇಂಧನ ಸಚಿವ ಪ್ರಧ್ಯುಮಾನ್ ತೋಮರ್ ಪರಿಶೀಲನೆಗೆ ತೆರಳಿದ್ದರು. ವಿದ್ಯುತ್ ಸಮಸ್ಯೆ ಕೇಳಿ ಬಂದ ಬಡವಾಣೆಗೆ ತೆರಳಿದ ಸಚಿವರು, ಅಲ್ಲಿಯೇ ಇದ್ದ ಏಣಿ ಸಹಾಯದಿಂದ ಕಂಬ ಏರಿ ಟ್ರಾನ್ಸ್ ಫಾರ್ಮರ್ ಪರಿಶೀಲನೆ ಮಾಡಿದರು. ಇನ್ನು ಟ್ರಾನ್ಸ್ ಫಾರ್ಮರ್ ಸುತ್ತಲೂ ಹಬ್ಬಿಕೊಂಡಿದ್ದ ಬಳ್ಳಿಯನ್ನ ತೆಗೆದು ಸ್ವಚ್ಛಗೊಳಿಸಿದರು. ತಮ್ಮ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಸ್ಥಳೀಯ ನಿವಾಸಿಗಳಲ್ಲಿ ಸಚಿವರು ಕ್ಷಮೆ ಕೇಳಿದರು.
ಬಳಿಕ ಮಾತನಾಡಿ , ವಿದ್ಯುತ್ ಪೂರೈಕೆ ವ್ಯತ್ಯಯಗೊಂಡ ಸ್ಥಳಗಳಲ್ಲಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಕಡೆ ಟ್ರಿಪಿಂಗ್ ಸಮಸ್ಯೆಯುಂಟಾಗಿದ್ದು, ಅದರನ್ನ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಸರ್ಕಾರದ ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ಯಾರಪ್ಪನ ಮರ್ಜಿಯಲ್ಲಿ ಇಲ್ಲ : ಸ್ವಪಕ್ಷೀಯರ ವಿರುದ್ಧ ಹಳ್ಳಿಹಕ್ಕಿ ಗುಡುಗು
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








