ಕಾಂಗ್ರೆಸ್ ಒಡಕಿನ ಮನೆ : ಆರ್. ಅಶೋಕ್ ವ್ಯಂಗ್ಯ
ಬೆಂಗಳೂರು : ಒಡಕು ಕಾಂಗ್ರೆಸ್ ನ ಜನ್ಮಸಿದ್ಧ ಹಕ್ಕಾಗಿದ್ದು, ಕಾಂಗ್ರೆಸ್ ಒಡಕಿನ ಮನೆ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಡಿಕೆಶಿ-ಜಮೀರ್ ಜಟಾಪಟಿ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, ಕಾಂಗ್ರೆಸ್ ಒಡಕಿನ ಮನೆಯಾಗಿದೆ.
ರಾಜ್ಯದಲ್ಲೂ ಎರಡು ಕಾಂಗ್ರೆಸ್ ಆಗಲಿದೆ. ಡಿಕೆಶಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಆಗುವ ಮುನ್ಸೂಚನೆ ಕಾಣುತ್ತಿದೆ.
ದೇಶದಲ್ಲಿ ನೂರೆಂಟು ಕಾಂಗ್ರೆಸ್ ಇದ್ದು, ಆದಷ್ಟು ಬೇಗ ಕರ್ನಾಟಕದಲ್ಲೂ ಎರಡು ಕಾಂಗ್ರೆಸ್ ಆಗಲಿದೆ.
ಸಿದ್ದರಾಮಯ್ಯ ಕಾಂಗ್ರೆಸ್, ಡಿಕೆಶಿ ಕಾಂಗ್ರೆಸ್ ಆಗುವ ಮುನ್ಸೂಚನೆ ಇದೆ. ಕೇವಲ ಅವರು ಅಧಿಕಾರಕ್ಕಾಗಿ ಜೊತೆಗಿದ್ದಾರೆ ಅಷ್ಟೇ.
ಆದರೆ ಅವರು ಮಾತ್ರ ಬೇರೆ ಬೇರೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, ನಮ್ಮಲ್ಲಿ ಯಾವುದೇ ಒಡಕು ಇಲ್ಲ, ನಾವೆಲ್ಲರೂ ಒಟ್ಟಾಗಿ ಇದ್ದೇವೆ.
ಶಾಸಕರು ಕೂಡ ಸಿಎಂ ಪರ ಇದ್ದಾರೆ. ಈಗಾಗಲೇ ಬಹಿರಂಗ ಹೇಳಿಕೆ ಕೊಟ್ಟವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.









