ಅಪ್ಪಂದಿರ ದಿನದಂದೇ ನಡೆದ ದುರಂತ – ಮಗಳ ಆತ್ಮಹತ್ಯೆ – ಹೃದಯಾಘಾತದಿಂದ ತಂದೆ ಸಾವು
ಮಂಡ್ಯ: ಮಂಡ್ಯದಲ್ಲಿ ಅಪ್ಪಂದಿರ ದಿನದಂದೇ ದುರ್ಘಟನೆಯೊಂದು ಜರುಗಿಹೋಗಿದೆ.. ಕ್ಷುಲ್ಲಕ ಕಾರಣಕ್ಕೆ ತಮದೆ ಮೇಲೆ ಮುನಿಸಿಕೊಂಡಿದ್ದ ಮಗಳು ಆತ್ಮಹತ್ಯೆಗೆ ಶರನಾದ ಬೆನ್ನಲ್ಲೇ ಆಘಾತ ತಾಳಲಾರದೇ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂತಹ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ.
ಬಾಂಧವ್ಯ (17), ರಾಜು (65) ಸಾವಿಗೀಡಾದ ತಂದೆ-ಮಗಲಾಗಿದ್ದಾರೆ. ಪಿಯುಸಿ ಕಾಲೇಜು ಸೇರಿಸುವ ವಿಚಾರದಲ್ಲಿ ತಂದೆಯ ಜತೆ ಮಗಳು ಮುನಿಸಿಕೊಂಡಿದ್ದಳು. ಆನ್ಲೈನ್ ಕ್ಲಾಸ್ ಗಳಿಂದಲೂ ಖಿನ್ನತೆಗೆ ಒಳಗಾಗಿದ್ದಳು. ವಿದ್ಯಾಭ್ಯಾಸ ಕುಂಠಿತವಾಗುವ ಆತಂಕವೂ ಅವಳನ್ನ ಕಾಡುತಿತ್ತು.
ಈ ಕಾರಣಗಳಿಂದ ಬನ್ನೂರು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಂದವ್ಯ ಮಧ್ಯರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಮಗಳ ಸಾವಿನಿಂದ ಆಘಾತಕಗೊಂಡ ತಂದೆಯೂ ಹೃದಯಾಘಾತದಿಂದ ಸಾವನಪ್ಪಿದ್ದು, . ಲೋ ಬಿಪಿಯಿಂದಾಗಿ ತಂದೆ ರಾಜು ಸಾವಿಗೀಡಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರ ಾಕ್ರಂದನ ಮುಗಿಲುಯ ಮುಟ್ಟಿದೆ.







