ಮಧ್ಯಪ್ರದೇಶ ಬಳಿಕ ಪಂಜಾಬ್ ನಲ್ಲಿ ಮೊದಲ ಹಸಿರು ಫಂಗಸ್ ಸೋಂಕು ಪತ್ತೆ
ಪಂಜಾಬ್ : ಒಂದೆದೆ ಕೊರೊನಾ ಹಾವಳಿ.. ಮತ್ತೊಂದೆಡೆ ದೇಶಾದ್ಯಂತೆ ಬ್ಲಾಕ್ ಪಂಗಸ್ ಅಟ್ಟಹಾಸದ ನಡುವೆ ಈಗ ಹಸಿರುವ ಫಂಗಸ್ ನ ಕಾಟವೂ ಶುರುವಾಗಿದೆ.. ಮೊದಲಿಗೆ ಮಧ್ಯಪ್ರದೇಶದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಸೋಂಕು ಈಗ ಪಂಜಾಬ್ ನಲ್ಲೂ ಪತ್ತೆಯಾಗಿದೆ..
ಈ ಮೂಲಕ ಪಂಜಾಬ್ ನಲ್ಲಿ ಪತ್ತೆಯಾದ ಮೊದಲ ಹಸಿರು ಫಂಗಸ್ ಸೋಂಕು ಇದಾಗಿದೆ.. ಜಲಂಧರ್ ನಲ್ಲಿ ಇದು ಪತ್ತೆಯಾಗಿದೆ. ಈ ಮೂಲಕ ಮಧ್ಯಪ್ರದೇಶದ ಬಳಿಕ ಹಸಿರು ಫಂಗಸ್ ಸೋಂಕು ವರದಿಯಾಗಿರುವ 2ನೇ ರಾಜ್ಯ ಇದಾಗಿದೆ.
60 ವರ್ಷದ ಕೋವಿಡ್ ಸೋಂಕಿತನಲ್ಲಿ ಹಸಿರು ಫಂಗಸ್ ಸೋಂಕು ಪತ್ತೆಯಾಯಿತು. ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಈ ಹಿಂದೆ ಇದೇ ಲಕ್ಷಣದ ಸೋಂಕು ವರದಿಯಾಗಿತ್ತು. ಆದರೆ, ಅದು ಹಸಿರು ಫಂಗಸ್ ಸೋಂಕು ಎಂಬುದು ದೃಢಪಟ್ಟಿಲ್ಲ. ಎಂದು ವರದಿಯಾಗಿದೆ. ಹಸಿರು ಫಂಗಸ್ ಸೋಂಕು ಪತ್ತೆಯಾದ ವ್ಯಕ್ತಿಯಲ್ಲಿ ಕಪ್ಪು ಫಂಗಸ್ ಸೋಂಕಿನ ಲಕ್ಷಣಗಳೇ ಕಂಡು ಬಂದಿವೆ ಎಂದೂ ಹೇಳಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








