ಕೊರೊನಾ 3ನೇ ಅಲೆ – ಮಕ್ಕಳೇ ಟಾರ್ಗೆಟ್ – ಮುಂದಿನ 8-10 ದಿನಗಳಲ್ಲಿ ಮಕ್ಕಳಿಗೆ ಲಸಿಕೆ..?
ದೇಶದಲ್ಲಿ ಕೊರೊನಾ 2ನೇ ಅಲೆ ಕಡಿಮೆಯಾಗ್ತಿದೆ.. ಆದ್ರೆ ಇದೇ ಸಮಾಧನದಲ್ಲಿದ್ದ ಜನರಿಗೆ ಕೋವಿಡ್ 3ನೇ ಅಲೆಯ ಆಘಾತವೂ ಇದುರಾಗಲಿದೆ.. ಆಗಸ್ಟ್ ವೇಳೆಗೆ 3ನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.. ಈ ನಡುವೆ ದೇಶದಲ್ಲಿ 18 ರಿಂದ 44 ವರ್ಷದವರಿಗೂ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ.
ಆದ್ರೆ ಕೊರೊನಾ ಮೂರನೆ ಅಲೆಯ ಟಾರ್ಗೆಟ್ ಮಕ್ಕಳೇ ಆಗಲಿದ್ದಾರೆ ಎನ್ನಲಾಗ್ತಿದೆ.. ಆದ್ರೆ ಮಕ್ಕಳಿಗೆ ಲಸಿಕೆ ಹಾಕಿಸುವ ಪ್ರಕ್ರಿಯೆ ಇನ್ನೂವರೆಗೂ ಬಾರತದಲ್ಲಿ ಆರಂಭವಾಗದ ಕಾರಣ, ಪೋಷಕರಲ್ಲಿಯೂ ಆತಂಕ ಮನೆ ಮಾಡಿದೆ.. ಈ ನಡುವೆ ಮುಂದಿನ 8 – 10 ದಿನಗಳಲ್ಲಿ ಕೈ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಜೈಕೋವ್ ಡಿ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಕೋರಿ ಡಿಜಿಸಿಐಗೆ ಮನವಿ ಮಾಡಲಾಗಿದೆ. ಮಾರುಕಟ್ಟೆಗೆ ಯಾವಾಗ ಈ ಲಸಿಕೆ ಬರುತ್ತೆ ಅನ್ನೋದು ಮುಂದಿನ ವಾರದೊಳಗಾಗಿ ತಿಳಿಯಲಿದೆ. ಈ ಲಸಿಕೆಗೆ ತುರ್ತು ಅನುಮೋದನೆ ಸಿಕ್ಕಲ್ಲಿ 12 ರಿಂದ 18 ವರ್ಷದವರೂ ಲಸಿಕೆ ಅಭಿಯಾನಕ್ಕೆ ಒಳಪಡಲಿದ್ದಾರೆ.
ಜೈಕೋವ್ ಡಿ ಲಸಿಕೆ ಪ್ರಾಯೋಗಿಕ ಹಂತ ಪೂರ್ಣಗೊಳ್ಳಲು ಮುಂದಿನ ವರ್ಷ ಫೆಬ್ರವರಿವರೆಗೆ ಸಮಯಾವಕಾಶ ಹಿಡಿಯಬಹುದು. ಆದರೆ ಮೂರನೇ ಅಲೆ ಪ್ರಾರಂಭಗೊಳ್ಳುವ ಮುನ್ನವೇ ಜೈಕೋವ್ ಡಿ ಲಸಿಕೆ ತುರ್ತು ಬಳಕೆಗೆ ಅನುಮತಿ ಕೇಳಲಾಗಿದೆ.
ಹೆಚ್ಚು ಮಕ್ಕಳಿರುವ ಪೋಷಕರಿಗೆ 1ಲಕ್ಷ ರೂ. ಬಹುಮಾನ – ಮಿಜೋರಾಂ ಸಚಿವ
‘ಕಿಮ್ ಸಮ್ರಾಜ್ಯ’ದಲ್ಲಿ ಆಹಾರ ಸಮಸ್ಯೆ : ಬಾಳೆಹಣ್ಣಿಗೆ 3,336 ರೂ., ಬ್ಲಾಕ್ ಟೀ ಬೆಲೆ 5,167 ರೂ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








