ಕೊರೊನಾ ಸೋಂಕು ಇಳಿಕೆ : ನಾಲ್ಕು ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ lock-down
ಬೆಂಗಳೂರು : ಕೊರೊನಾ ಸೋಂಕಿ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಲ್ಕು ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದೆ.
ಇಂದು ದಕ್ಷಿಣ ಕನ್ನಡ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸೋಂಕು ಕಡಿಮೆಯಾದ ದಕ್ಷಿಣಕನ್ನಡ, ಹಾಸನ, ದಾವಣಗೆರೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 1ರವರೆಗೆ ಎಲ್ಲಾ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಆದ್ರೆ ಹವಾನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ಶಾಪಿಂಗ್ ಸಂಕೀರ್ಣಗಳು ಮತ್ತು ಮಾಲ್ಗಳಿಗೆ ಅವಕಾಶ ನೀಡಿಲ್ಲ.
ಇಂದಿನ ಈ ಆದೇಶ ಜೂನ್ 21ರಿಂದ ಅನ್ವಯವಾಗುವಂತೆ ಜುಲೈ 5ರ ಬೆಳಗ್ಗೆ 5 ಗಂಟೆವರೆಗೆ ಇರುತ್ತದೆ.









