ನ್ಯಾಯಾಲಯದಲ್ಲಿ ಫೇಸ್ ಬುಕ್, ವಾಟ್ಸಾಪ್ ಗೆ ಹಿನ್ನಡೆ..!
ನವದೆಹಲಿ : ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಹೊಸ ಐಟಿ ನಿಯಮಗಳನ್ನ ಅಳವಡಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ.. ಆದ್ರೆ ಇದಕ್ಕೆ ಫೇಸ್ ಬುಕ್ , ವಾಟ್ಸಾಪ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಫೇಸ್ಬುಕ್, ವಾಟ್ಸಾಫ್ ಜಾಲತಾಣಗಳಿಗೆ ಹೊಸ ನೀತಿ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಭಾರತದಲ್ಲಿ ನಿಷೇಧವಾಗುತ್ತಾ ವಾಟ್ಸಾಪ್..!
ತನಿಖೆಗೆ ಸಹಕಾರಿಯಾಗುವಂತೆ ಅವಶ್ಯವಿರುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು ಸೇರಿದಂತೆ ಕೆಲ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಸಾಮಜಿಕ ಜಾಲತಾಣಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಈ ಕುರಿತಂತೆ ಫೇಸ್ಬುಕ್ ಮತ್ತು ವಾಟ್ಸಾಫ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯವು ತಡೆಯಾಜ್ಞೆ ನೀಡಲು ನಿರಾಕರಿಸಿ ಮುಂದಿನ ವಿಚಾರಣೆಯನ್ನು ಜು.9ಕ್ಕೆ ಮುಂದೂಡಿದೆ.
ಭಾರತದಲ್ಲಿ ಗೂಗಲ್, ಫೇಸ್ಬುಕ್ ಮತ್ತು ಟ್ವಿಟರ್ ನಂತಹ ಡಿಜಿಟಲ್ ಪ್ಲಾಟ್ ಫಾರ್ಮ್ಗಳಿಗೆ ಜನರು ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಇವುಗಳಿಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಿದೆ.. ಅದ್ರಲ್ಲೂ ಫೇಸ್ ಬುಕ್ , ಇನ್ಸ್ಟಾಗ್ರಾಮ್ , ಟ್ವಿಟ್ಟರ್ ಗೆ ಹೆಚ್ಚು ಭಾರತದ ಬಳಕೆದಾರರಿದ್ದಾರೆ.. ಆದ್ರೆ ಇದೀಗ ಈ ಆಪ್ ಗಳನ್ನ ಭಾರತ ಸಂಪೂರ್ಣವಾಗಿ ಬ್ಲಾಕ್ ಮಾಡುತ್ತಾ ಎನ್ನೋ ಪ್ರಶ್ನೆಗಳು ಕಾಡತೊಡಗಿದೆ..








