ದಕ್ಷಿಣ ಕನ್ನಡ : ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಪ್ರಾರಂಭ – ಆದರೆ ಪ್ರಯಾಣಿಕರೇ ಇಲ್ಲ
ಲಾಕ್‌ಡೌನ್ ಸಡಿಲಿಕೆ ನಂತರ, ಜಿಲ್ಲೆಯಲ್ಲಿ ಜೂನ್ 23 ರ ಬುಧವಾರ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ಪ್ರಾರಂಭಿಸಿದವು. ಆದರೆ ಖಾಸಗಿ ಬಸ್ಸುಗಳು ಇನ್ನೂ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ.
ಲಾಕ್‌ಡೌನ್ ಮೊದಲು ಸಾಮಾನ್ಯವಾಗಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣದಲ್ಲಿ ಬುಧವಾರ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಕಂಡು ಬಂದರು.

ಪ್ರಯಾಣಿಕರ ಕೊರತೆಯು ಬಸ್ಸುಗಳ ಲಭ್ಯತೆಯ ಬಗ್ಗೆಗಿನ ಮಾಹಿತಿಯ ಕೊರತೆಯಿಂದಾಗಿರಬಹುದು ಅಥವಾ ನಗರವನ್ನು ತಲುಪಲು ಯಾವುದೇ ಖಾಸಗಿ ಬಸ್‌ಗಳು ಇಲ್ಲದಿರುವುದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆದರೂ, ದಿನಗಳು ಕಳೆದಂತೆ, ಬಸ್ ನಿಲ್ದಾಣವು ತನ್ನ ಎಂದಿನ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಪ್ರಯಾಣಿಕರ ಸಂಖ್ಯೆಯನ್ನು ಸೀಮಿತಗೊಳಿಸಲು ಸಂಬಂಧಿಸಿದ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಬಸ್ಸು ಸಂಚಾರ ಪ್ರಾರಂಭವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1406802102706397185?s=19
https://twitter.com/SaakshaTv/status/1407164561485185026?s=19
https://twitter.com/SaakshaTv/status/1406829577209581569?s=19
https://twitter.com/SaakshaTv/status/1407181615835586561?s=19
#KSRTCbuses #nopassengers








