ರಾಖಿ ಭಾಯ್ ಹಾದಿಯನ್ನೇ ಅನುಸರಿಸಿದ ಬಾಲಿವುಡ್ ನ ‘ಬ್ಯಾಡ್ ಬಾಯ್’
ಬಾಲಿವುಡ್ ನ ‘ಬ್ಯಾಡ್ ಬಾಯ್’ ಸಲ್ಮಾನ್ ಖಾನ್ ಅವರು ಇದೀಗ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಅವರ ಹಾದಿಯನ್ನೇ ಹಿಡಿದಿದ್ದಾರೆ… ಯಾವ ವಿಚಾರದಲ್ಲಿ ಅಂತ ಅಚ್ಚರಿ ಪಡಬೇಡಿ… ಅಂದ್ಹಾಗೆ ಇತ್ತೀಚೆಗೆಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದ ಸಿನಿಮಾರಂಗದ ಕಾರ್ಮಿಕರ ಕುಟುಂಬಗಳ ನೆರವಿಗೆ ಯಶ್ ಧಾವಿಸಿದ್ದರು..
ಇದೀಗ ಸಲ್ಮಾನ್ ಕಾನ್ ಸಹ ಸಾವಿರ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಅಂದ್ಹಾಗೆ ಸಲ್ಮಾನ್ ಖಾನ್ ಅವರು ಸಹ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಕಲಾವಿಧರಿಗೆ ನೆರವಾಗುತ್ತಿದ್ದಾರೆ.. ಇತ್ತೀಚಿಗಷ್ಟೆ ಸಾಹಸ ಕಲಾವಿದರಿಗೆ ಧನ ಸಹಾಯ ಮಾಡಿದರು. ಈಗ ಸಲ್ಮಾನ್ ಖಾನ್ ಸಹ ಅದೇ ಮಾರ್ಗ ಅನುಸರಿಸಿ 25 ಸಾವಿರ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಮುಂದೆ ಓದಿ…
ಕೊರೊನಾದಿಂದ ಸಂಕಷ್ಟದಲ್ಲಿರುವ ಸುಮಾರು 25 ಸಾವಿರ ಕುಟುಂಬಗಳಿಗೆ ತಲಾ 1500 ರೂಪಾಯಿಯಂತೆ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕಾಗಿ ಸಲ್ಮಾನ್ ಖಾನ್ 3.75 ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಅಧ್ಯಕ್ಷ ಬಿ.ಎನ್ ತಿವಾರಿ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ಸಲ್ಮಾನ್ ಖಾನ್ ಹಿಂದಿ ಚಿತ್ರರಂಗದ ದೊಡ್ಡ ನಟರು. ನಾವು ಕಷ್ಟದಲ್ಲಿದ್ದಾಗೆಲ್ಲಾ ಸಹಾಯ ಮಾಡಿದ್ದಾರೆ. ಮೊದಲ ಲಾಕ್ಡೌನ್ ಸಮಯದಲ್ಲೂ ನೆರವು ನೀಡಿದ್ದರು. ಅವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ, ಭವಿಷ್ಯದಲ್ಲೂ ನಮ್ಮ ಜೊತೆ ಇರುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.