ಕಟ್ಟಡ ಸಂಕೀರ್ಣ ಕುಸಿತ: ಅವಶೇಷಗಳಡಿ ಸು. 159 ಮಂದಿ, 4 ಶವ ಪತ್ತೆ
ಅಮೆರಿಕಾ : ಅಮೆರಿಕದ ಫ್ಲೋರಿಡಾದ ಮಿಯಾಮಿ ನಗರದ ಸಮೀಪ ಇತ್ತೀಚೆಗೆ ಸಂಭವಿಸಿದ ಕಟ್ಟಡ ಕುಸಿತದ ಪ್ರಕರಣದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಕಟ್ಟಡ ಸಮುಚ್ಚಯದ ಒಂದು ಭಾಗ ಭಾಗಶಃ ಕುಸಿದುಬಿದ್ದು, 159ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.. ಇನ್ನೂ ನಾಲ್ವರು ಮೃತಪಟ್ಟಿರೋದಾಗಿ ವರದಿಯಾಗಿದೆ..
ಮಿಯಾಮಿ ನಗರದ ಸರ್ಫ್ಸೈಡ್ ಪ್ರದೇಶದಲ್ಲಿರುವ ಶಾಂಪ್ಲೇನ್ ಟವರ್ಸ್ ಸೌತ್ ಎಂಬ ಹೆಸರಿನ ಕಟ್ಟಡ ಸಂಕೀರ್ಣ ಶುಕ್ರವಾರ ನಸುಕಿನಲ್ಲಿ 1:30ಗಂಟೆಯ ವೇಳೆಗೆ ಕುಸಿದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಕಟ್ಟಡದ ಹಾನಿಯಾಗದೆ ಉಳಿದ ಭಾಗಗಳಲ್ಲಿ ನೆಲೆಸಿರುವವರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಟ್ಟಡದ ಕುಸಿದುಬಿದ್ದ ಭಾಗದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯೂ ಭರದಿಮದ ಸಾಗಿದೆ.. ಸಾವು ನೋವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ..








