‘ಕಬ್ಜ’ ಸಿನಿಮಾದ ಕಾಂಬೊ ಪೋಸ್ಟರ್ ರಿಲೀಸ್ .. ಉಪ್ಪಿ ಜೊತೆ ಕಾಣಿಸಿಕೊಂಡ ಕಿಚ್ಚ..!
ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆಯ ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಮಡಿಯಾ ಸಿನಿಮಾವಾದ ಕಬ್ಜದ ಕಾಂಬೋ ಪೋಸ್ಟರ್ ರಿಲೀಸ್ ಆಗಿದೆ.. ಆರ್. ಚಂದ್ರು ಆಕ್ಷನ್ ಕಟ್ ಹೇಳ್ತಿರುವ ಈ ಸಿನಿಮಾದ ಕಾಂಬೋ ಪೋಸ್ಟರ್ ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಕಾಣಿಸಿಕೊಳ್ತಿರುವುದು ಪೋಸ್ಟರ್ ರಿಲೀಸ್ ಆದ ನಂತರದಲ್ಲಿ ಖಚಿತವಾಗಿದೆ..
ಹೌದು.. ಕಬ್ಜದ ನೂತನ ಪೋಸ್ಟರ್ ನಲ್ಲಿ ಉಪೇಂದ್ರ ಜೊತೆ ಸುದೀಪ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಬಿದ್ದಿದೆ.. ಕಬ್ಜ ಚಿತ್ರದ ಕಾಂಬೊ ಪೋಸ್ಟರ್ ಇಂದು ಬೆಳಗ್ಗೆ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗ್ತಿದೆ. ಇಂದು ಸಂಜೆ ಈ ಸಿನಿಮಾದ ಕಾಂಬೊ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
“ಪುರುಷರು 10 ಮದುವೆಯಾಗಬಹುದು, ಮಹಿಳೆಯರು 2ನೇ ಮದುವೆಯಾದ್ರೆ ತಪ್ಪಾ..?”
ಇನ್ನೂ ಈ ಸಿನಿಮಾ ಕನ್ನಡ, ಹಿಂದಿ , ತಮಿಳು , ತೆಲುಗು , ಸೇರಿದಂತೆ ಒಟ್ಟು ಸುಮಾರು 6 -7 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಬ್ಜ ಚಿತ್ರದ ಕಾಂಬೊ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಿದ್ದು, ಮೋಷನ್ ಪೋಸ್ಟರ್ ಅನ್ನು ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.
ಅಂದ್ಹಾಗೆ ಉಪೇಂದ್ರ ಅವರು ರಾಜಕೀಯ ಹಾಗೂ ಸಿನಿಮಾ ಎರೆಡರಲ್ಲೂ ಸಕ್ರಿಯರಾಗಿದ್ದಾರೆ.. ಜೊತೆಗೆ ಕೊರೊನಾ ಲಾಕ್ ಡೌನ್ ನಡುವೆ , ಬಡವರಿಗೆ , ಸಿನಿಮಾರಂಗದ ಕಾರ್ಮಿಕರು , ರತರಿಗೆ ಸಹಾಯ ಮಾಡುತ್ತಾ ಜಾಗೃತಿ ಮುಡಿಸುತ್ತಿದ್ದಾರೆ.. ಇನ್ನೂ ಸಿನಿಮಾ ವಿಚಾರಕ್ಕೆ ಬಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಕಬ್ಜ ಬಿಟ್ಟು ಲಗಾಮ್, ಸೇರಿದಂತೆ ಇನ್ನೂ ಕೆಲ ಪ್ರಾಜೆಕ್ಟ್ ಳಲ್ಲಿ ಮುಂದಿನ ದಿನಗಳಲ್ಲಿ ಬ್ಯುಸಿಯಾಗಲಿದ್ದಾರೆ,..








