ಪತ್ನಿಗೆ ಟಿಕ್ ಟಾಕ್ ಹುಚ್ಚು… ಸಹಿಸಲಾಗದೇ ಹೆಂಡತಿ ಜೊತೆ ಅತ್ತೆಯನ್ನೂ ಕೊಂದ ಪತಿ..!
ಟಿಕ್ ಟಾಕ್ ಇದೊಂದು ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಪ್ರಸಿದ್ಧಿ ಪಡೆದುಕೊಂಡಿರುವ ಸಮಾಜಿಕ ಜಾಲತಾಣ , ಸಾರ್ಟ್ ವಿಡಿಯೋ ಆಪ್ ಆಗಿ ಹೊರಹೊಮ್ಮಿದೆ.. ಆದ್ರೆ ಕೆಲವೊಮ್ಮೆ ಮನರಂಜನೆ ಅನ್ನೋಕಿಂತ , ಕೆಲವರು ಮಾನಸಿಕ ಸ್ಥೀಮಿತೆ ಕಳೆದುಕೊಂತೆ ವರ್ತಿಸಿ ಜೀವಕ್ಕೆ ಕುತ್ತು ತಂದುಕೊಂಡಿರುವುದು ಗೊತ್ತಿದೆ.. ಇನ್ನಮೂ ಕೆಲವರಂತೂ ದಿನವಿಡೀ ಟಿಕ್ ಟಾಕ್ ಒಂದಿದ್ರೆ , ಊಟ , ತಿಂಡಿ , ಮನೆ ಮಠ ಏನೂ ಬೇಡ ಅನ್ನೋ ಮಟ್ಟಿಗೆ ಈ ಆಪ್ ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ..
ಇನ್ನೂ ಭಾರತದಲ್ಲಿ ಈ ಆಪ್ ಅನ್ನ ಬ್ಯಾನ್ ಮಾಡಲಾಗಿದೆ.. ಆದ್ರೆ ಇದು ಬ್ಯಾನ್ ಆಗುವ ಮುನ್ನ ಭಾರತೀಯರು ಈ ಆಪ್ ಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದರು.. ಹಾಗೆ ನೋಡೋಕೋದ್ರೆ ಚೀನಾ ಮೂಲದ ಈ ಆಪ್ ಗೆ ಹೆಚ್ಚು ಬಳಕೆದಾರರು ಇದ್ದಿದ್ದೇ ನಮ್ಮ ಬಾರತದಲ್ಲಿ.. ಆದ್ರೆ ಭಾತದ ಇದೇ ಆಪ್ ಅನ್ನ ಬ್ಯಾನ್ ಮಾಡುವ ಮೂಲಕ ಚೈನಾಗೆ ಆರ್ಥಿಕ ಪೆಟ್ಟು ನೀಡಿತ್ತು.. ಆದ್ರೆ ಅನೇಕ ದೇಶಗಳಲ್ಲಿ ಈ ಆಪ್ ಪ್ರಸಿದ್ಧಿ ಪಡೆದಿದೆ.. ಅದ್ರಲ್ಲೂ ಚೀನಾದ ಗುಲಾಮ ದೇಶ ಪಾಕಿಸ್ತಾನವೂ ಮುಂಚೂಣಿಯಲ್ಲಿದೆ.. ಆದ್ರೆ ಇದೇ ಆಪ್ ನ ಹುಚ್ಚಿಗೆ ಬಿದ್ದ 6 ಗೃಹಿಣಿಯರು ತಮ್ಮ ಗಂಡಂದಿರ ಕೈನಿಂದಲೇ ಕೊಲೆಯಾಗಿರುವ ಘಟನೆ ಪಾಕ್ ನಲ್ಲಿ ನಡೆದಿದೆ..
ಪತ್ನಿಗೆ ಟಿಕ್ ಟಾಕ್ ಹುಚ್ಚು ಹಿಡಿದಿದ್ದನ್ನ ಸಹಿಸಲಾಗದ ಪತಿಯೊಬ್ಬ ಆಕೆಯ ಜೊತೆಗೆ ಆಕೆಯ ತಾಯಿಯನ್ನೂ ( ಅತ್ತೆ) ಹತ್ಯೆಗೈದಿದ್ದಾನೆ.. ಆರೋಪಿ ಇಶಾಕ್ ಪತ್ನಿ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡ್ತಿದ್ದಳು. ಆಕೆ ಟಿಕ್ ಟಾಕ್ ಗೆ ವಿಡಿಯೋ ಅಪ್ಲೋಡ್ ಮಾಡುವುದು ಹಾಗೂ ಜನರ ಜೊತೆ ಮಾತನಾಡುವುದು ಪತಿಗೆ ಇಷ್ಟವಿರಲಿಲ್ಲ.
ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಅನೇಕ ಬಾರಿ ಗಲಾಟೆ ನಡೆದಿದೆ. ಆದ್ರೆ ಪತ್ನಿ ಇಶಾಕ್ ಮಾತು ಕೇಳಿರಲಿಲ್ಲವಂತೆ. ಇಬ್ಬರ ಮಧ್ಯೆ ಗಲಾಟೆ ಹೆಚ್ಚಾಗ್ತಿದ್ದಂತೆ ಪತ್ನಿ ತವರಿಗೆ ಹೋಗಿದ್ದಳಂತೆ. ಅತ್ತೆ ಜೊತೆಯೂ ಇದೇ ವಿಚಾರಕ್ಕೆ ಇಶಾಕ್ ಗಲಾಟೆ ಮಾಡಿದ್ದನಂತೆ. ಭಾನುವಾರ ಸಂಜೆ ಪತ್ನಿ ಮನೆಗೆ ಬಂದ ಇಶಾಕ್ ಗುಂಡು ಹಾರಿಸಿದ್ದಾನೆ. ಇಶಾಕ್ ಗುಂಡಿಗೆ ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ರೀತಿ ಕಳೆದ ಎರಡು ತಿಂಗಳಿನಲ್ಲಿ 6 ಮಂದಿ ಗೃಹಿಣಿಯರು ತಮ್ಮ ಗಂಡಂದಿರ ಕೈಯಲ್ಲೇ ಕೊಲೆಯಾಗಿರೋ ಘಟನೆಗಳು ವರದಿಯಾಗಿವೆ..








