ಹುಲಿಗೆಮ್ಮ ದೇವಿ ದೇಗುಲ ಸುತ್ತ ನಿಷೇದಾಜ್ಞೆ ಜಾರಿ
ಕೊಪ್ಪಳ : ಜಿಲ್ಲೆಯ ಪ್ರಸಿದ್ಧ ದೇಗುಲವಾಗಿರುವ ಹುಲಿಗೆಮ್ಮ ದೇವಿಯ ಸಾರ್ವಜನಿಕ ದರ್ಶನ ಈ ವಾರವು ಸ್ಥಗಿತಗೊಳಿಸಲಾಗಿದೆ.
ಇಂದಿನಿಂದ ನಾಳೆ ಮಧ್ಯರಾತ್ರಿಯವರೆಗೂ ದೇವಸ್ಥಾನದ ಸುತ್ತಲು ಕಲಂ 144ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ಕೊಪ್ಪಳ ಜಿಲ್ಲೆಯ ತುಂಗಭದ್ರಾ ತಟದಲ್ಲಿರುವ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನಕ್ಕೆ ನಮ್ಮ ರಾಜ್ಯ ಮಾತ್ರವಲ್ಲದೇ, ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣದಿಂದ ಲಕ್ಷಾಂತರ ಭಕ್ತ ಆಗಮಿಸುತ್ತಾರೆ.
ಆದ್ರೆ ಕೊರೊನಾ ಲಾಕ್ ಡೌನ್ ನಿಂದಾಗಿ ಹುಲಿಗಿಯ ಹುಲಿಗೆಮ್ಮ ದೇವಸ್ಥಾನವು ಏಪ್ರಿಲ್ 24 ರಿಂದ ಭಕ್ತರಿಗೆ ದೇವಿ ದರ್ಶನ ಬಂದ್ ಮಾಡಲಾಗಿದೆ.
ಪ್ರತಿ ಹುಣ್ಣಿಮೆ ಹಾಗೂ ಮಂಗಳವಾರ, ಶುಕ್ರವಾರ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.a









