ಹಾಸನ : ಭಾರತಕ್ಕೆ ಮಹಾಮಾರಿ ಕೊರೊನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೊನಾ ಕಂಟಕ ಕೊನೆಯಾಗಲಿದೆ ಎಂದು ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು, ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಸಿರಿವಂತನ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ. ಅಮೆರಿಕಗೆ ಇನ್ನೂ ತೀವ್ರ ಗಂಡಾಂತರ ತಪ್ಪಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ಮುಂದುವರೆದು, ಯುದ್ಧವಿಲ್ಲದೇ ಜನರು ಮಡಿಯುತ್ತಾರೆ. ಭಾರತಕ್ಕೆ ಮಹಾಮಾರಿ ಕೊರೊನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೊನಾ ಕಂಟಕ ಕೊನೆಯಾಗಲಿದೆ. ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ. ಜನರಿಗೆ, ಕೆಲ ಮಂತ್ರಿಗಳಿಗೆ ಕಂಟಕ ಆಗಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಭಾರತಕ್ಕೆ, ಕರ್ನಾಟಕಕ್ಕೆ ಮಹಾಮಾರಿ ಕೊರೊನಾದಿಂದ ಹೆಚ್ಚಿನ ಸಮಸ್ಯೆ ಉಂಟಾಗೋದಿಲ್ಲ. ಅಮೇರಿಕಾಕ್ಕೆ ಕೊರೊನಾ ಕಂಟಕ ಸದ್ಯಕ್ಕೆ ಬಿಡೋದಿಲ್ಲ ಎಂಬುದಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ
ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...








